34 ವರ್ಷದ ಎರಡು ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಧನಾತ್ಮಕ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಜನವರಿ 23ಕ್ಕೆ ಅಂತಿಮ ಪಂದ್ಯ ನಡೆಯಲಿದೆ

ನವದೆಹಲಿ(ಜ.09): 3ನೇ ಆವೃತ್ತಿಯ ಪ್ರೊ ಕುಸ್ತಿ ಲೀಗ್‌'ಗೆ ಇಂದು ಚಾಲನೆ ದೊರೆಯಲಿದೆ. ಪಂದ್ಯಾವಳಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಸುಶೀಲ್ ಕುಮಾರ್‌'ರ ಡೆಲ್ಲಿ ಸುಲ್ತಾನ್ಸ್ ಹಾಗೂ ಸಾಕ್ಷಿ ಮಲಿಕ್‌'ರ ಮುಂಬೈ ಮಹಾರಥಿ ತಂಡಗಳು ಸೆಣಸಾಡಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ನಡೆದಿದ್ದ ಆಟಗಾರರ ಹರಾಜಿನಲ್ಲಿ ಸುಶೀಲ್ ಬರೋಬ್ಬರಿ 55 ಲಕ್ಷ ರು.ಗೆ ಬಿಕರಿಯಾಗಿದ್ದರು. ಈ ವರ್ಷ 57 ಕೆಜಿ, 65 ಕೆಜಿ, 74 ಕೆಜಿ, 69 ಕೆಜಿ ಹಾಗೂ 125 ಕೆಜಿ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.

34 ವರ್ಷದ ಎರಡು ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಧನಾತ್ಮಕ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಜನವರಿ 23ಕ್ಕೆ ಅಂತಿಮ ಪಂದ್ಯ ನಡೆಯಲಿದೆ