ನವದೆಹಲಿ(ಡಿ.29): ಭಾರತದ ಸ್ಟಾರ್ ಕುಸ್ತಿಪಟು ಸುಶೀಲ್ ಕುಮಾರ್ ಮುಂದಿನ ವರ್ಷದ ನವೆಂಬರ್‌'ನಲ್ಲಿ ವಿಶ್ವ ಮನರಂಜನಾ ಕುಸ್ತಿ(ಡಬ್ಲ್ಯೂಡಬ್ಲ್ಯೂಇ)ಗೆ ಪ್ರವೇಶಿಸಲಿದ್ದಾರೆ.

ಇದರೊಂದಿಗೆ ಈ ಮಾದರಿಯ ಕುಸ್ತಿಗೆ ತೆರಳಿದ 2ನೇ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಸುಶೀಲ್ ಪಾತ್ರರಾಗಲಿದ್ದಾರೆ. ಈ ಮೊದಲು ಗ್ರೇಟ್ ಕಲಿ ಈ ವಿಭಾಗದಲ್ಲಿ ಕುಸ್ತಿಯಲ್ಲಿ ಮಿಂಚಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಡಬ್ಲ್ಯೂಡಬ್ಲ್ಯೂಇನ ಕನ್ಯಾನ್ ಸೆಮನ್ ಅವರೊಂದಿಗೆ ಛತ್ರಸಾಲ ಕ್ರೀಡಾಂಗಣದಲ್ಲಿ ಸುಶೀಲ್ ಚರ್ಚಿಸಿದ್ದರು. ಅಲ್ಲದೇ ಈ ಬಾರಿಯ 2ನೇ ಆವೃತ್ತಿಯ ಪ್ರೊ ಕುಸ್ತಿ ಲೀಗ್‌'ನಲ್ಲಿ ಸುಶೀಲ್ ಅವರನ್ನು ಯಾವ ತಂಡಗಳು ಖರೀದಿಸಿಲ್ಲ. ಹೀಗಾಗಿ ಸುಶೀಲ್ ಡಬ್ಲ್ಯೂಡಬ್ಲ್ಯೂಇ ಕುಸ್ತಿಯತ್ತ ವಾಲಿದ್ದಾರೆ.

ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದಿರುವ ಸುಶೀಲ್ ಡಬ್ಲ್ಯೂಡಬ್ಲ್ಯೂಇ ಜತೆ ಒಪ್ಪಂದಕ್ಕೆ ಕೂಡ ಸಹಿ ಹಾಕಿದ್ದಾರಂತೆ.