ಚೆನ್ನೈಗೆ ಸವಾಲಿನ ಗುರಿ ನೀಡಿದ ಮುಂಬೈ ಇಂಡಿಯನ್ಸ್

First Published 7, Apr 2018, 10:00 PM IST
Suryakumar Yadav Krunal Pandya Take Mumbai To 165 for 4 vs Chennai
Highlights

ಕಿಶನ್ ಹಾಗೂ ಯಾದವ್ ಔಟ್ ಆಗುತ್ತಿದ್ದಂತೆ ಪಾಂಡ್ಯ ಬ್ರದರ್ಸ್ 5ನೇ ವಿಕೆಟ್'ಗೆ ಮುರಿಯದ 52 ರನ್'ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಕೃನಾಲ್ ಪಾಂಡ್ಯ ಕೇವಲ 22 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ನೆರವಿನೊಂದಿಗೆ 41 ರನ್ ಸಿಡಿಸಿದರೆ, ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ ಕೇವಲ 22 ರನ್'ಗಳನ್ನಷ್ಟೇ ಕಲೆಹಾಕಿದರು.

ಮುಂಬೈ(ಏ.07): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್'ಮನ್'ಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 166 ರನ್'ಗಳ ಸವಾಲಿನ ಮೊತ್ತ ಕಲೆಹಾಕಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್'ಗಿಳಿದ ಮುಂಬೈ ಇಂಡಿಯನ್ಸ್ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ಮೂರನೇ ಓವರ್'ನ ಮೊದಲ ಎಸೆತದಲ್ಲಿಯೇ ದೀಪಕ್ ಚಾಹರ್ ಚೆನ್ನೈಗೆ ಮೊದಲ ಯಶಸ್ಸು ತಂದುಕೊಟ್ಟರು. ಕೇವಲ ಎರಡು ಎಸೆತಗಳನ್ನೆದುರಿಸಿ ಎವಿನ್ ಲೆವಿಸ್ ಪೆವಿಲಿಯನ್ ಸೇರಿದರು. ಇನ್ನು ನಾಯಕ ರೋಹಿತ್ ಶರ್ಮಾ ಆಟ ಕೇವಲ 15 ರನ್'ಗಳಿಗೆ ಸೀಮಿತವಾಯಿತು.

ಮುಂಬೈಗೆ ಬಲ ತುಂಬಿದ ಮಧ್ಯಮ ಕ್ರಮಾಂಕ:

ಕೇವಲ 20 ರನ್'ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈಗೆ ಮಧ್ಯಮಕ್ರಮಾಂಕದಲ್ಲಿ ವಿಕೆಟ್'ಕೀಪರ್ ಬ್ಯಾಟ್ಸ್'ಮನ್ ಇಶಾನ್ ಕಿಶನ್(40) ಸೂರ್ಯಕುಮಾರ್ ಯಾದವ್(43) ಉಪಯುಕ್ತ ಜತೆಯಾಟವಾಡುವ ಮೂಲಕ ಆಸರೆಯಾದರು. ಮೂರನೇವಿಕೆಟ್'ಗೆ ಈ ಜೋಡಿ 70 ರನ್'ಗಳ ಜತೆಯಾಟವಾಡಿತು. ಶತಕದ ಜತೆಯಾಟವಾಡುವತ್ತ ಮುನ್ನುಗ್ಗುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಶೇನ್ ವಾಟ್ಸನ್ ಯಶಸ್ವಿಯಾದರು. ಸೂರ್ಯಕುಮಾರ್ ಯಾದವ್ ದೊಡ್ಡಹೊಡೆತಕ್ಕೆ ಕೈಹಾಕಿ ಭಜ್ಜಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಇಶಾನ್ ಕಿಶನ್ ಕೂಡಾ ಪೆವಿಲಿಯನ್ ಸೇರಿದರು.

ಅಬ್ಬರಿಸಿದ ಕೃನಾಲ್, ಮಂಕಾದ ಹಾರ್ದಿಕ್:

ಕಿಶನ್ ಹಾಗೂ ಯಾದವ್ ಔಟ್ ಆಗುತ್ತಿದ್ದಂತೆ ಪಾಂಡ್ಯ ಬ್ರದರ್ಸ್ 5ನೇ ವಿಕೆಟ್'ಗೆ ಮುರಿಯದ 52 ರನ್'ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಕೃನಾಲ್ ಪಾಂಡ್ಯ ಕೇವಲ 22 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ನೆರವಿನೊಂದಿಗೆ 41 ರನ್ ಸಿಡಿಸಿದರೆ, ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ ಕೇವಲ 22 ರನ್'ಗಳನ್ನಷ್ಟೇ ಕಲೆಹಾಕಿದರು.

ಚೆನ್ನೈ ಪರ ವಾಟ್ಸನ್ 2 ವಿಕೆಟ್ ಪಡೆದರೆ, ತಾಹಿರ್ ಹಾಗೂ ದೀಪಕ್ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಮುಂಬೈ ಇಂಡಿಯನ್ಸ್: 165/4

ಸೂರ್ಯಕುಮಾರ್ ಯಾದವ್: 43

ಕೃನಾಲ್" 41*

ವಾಟ್ಸನ್: 29/2

(* ವಿವರ ಅಪೂರ್ಣ)

loader