5ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯು ಜುಲೈ 18ರಂದು ಹೈದರಾಬಾದ್'ನಲ್ಲಿ ಆರಂಭವಾಗಲಿದ್ದು, ಜುಲೈ 30ರಂದು ಹರ್ಯಾಣ ತಂಡವು ಯು ಮುಂಬಾ ಎದುರು ಮೊದಲ ಪಂದ್ಯವನ್ನಾಡಲಿದೆ.
ಸೋನೆಪತ್(ಜು.25): ಪ್ರೊ ಕಬಡ್ಡಿ ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ಹರ್ಯಾಣ ಸ್ಟೀಲರ್ಸ್ ತಂಡದ ನಾಯಕರಾಗಿ ಸ್ಟಾರ್ ಡಿಫೆಂಡರ್ ಸುರೇಂದರ್ ನಾಡಾ ನೇಮಕಗೊಂಡಿದ್ದಾರೆ. ಉಪನಾಯಕರಾಗಿ ವಜೀರ್ ಸಿಂಗ್ ಉಪನಾಯಕರಾಗಿ ಆಯ್ಕೆ ಮಾಡಲಾಗಿದೆ.
ಮೂರು ವಾರಗಳ ಕಾಲ ಬಳ್ಳಾರಿಯಲ್ಲಿ ಅಭ್ಯಾಸ ನಡೆಸಿದ ತಂಡ ಪಂದ್ಯಾವಳಿಗೆ ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ತಂಡದ ಮುಖ್ಯ ಕೋಚ್ ರಣ್'ಬೀರ್ ಸಿಂಗ್ ತಿಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಸುರೇಂದರ್ ನಾಡಾ ಬೆಂಗಳೂರು ಬುಲ್ಸ್ ತಂಡದ ನಾಯಕರಾಗಿದ್ದರು.
ಇದೇ ವೇಳೆ ಡೆಲ್ಲಿ ದಬಾಂಗ್ ತಂಡ ಮಿರಾಜ್ ಶೇಖ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಿದೆ.
5ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯು ಜುಲೈ 18ರಂದು ಹೈದರಾಬಾದ್'ನಲ್ಲಿ ಆರಂಭವಾಗಲಿದ್ದು, ಜುಲೈ 30ರಂದು ಹರ್ಯಾಣ ತಂಡವು ಯು ಮುಂಬಾ ಎದುರು ಮೊದಲ ಪಂದ್ಯವನ್ನಾಡಲಿದೆ.