ಅರ್ಧಶತಕ ಬಾರಿಸಿದ ಶಿಖರ್ ಧವನ್ ಪಂದ್ಯಪುರುಷೋತ್ತಮ ಗೌರವಕ್ಕೆ ಭಾಜನರಾದರು.

ಹೈದರಾಬಾದ್(ಏ.09): 2016ರ ಚಾಂಪಿಯನ್ ಸನ್'ರೈಸರ್ಸ್ ಹೈದರಾಬಾದ್ ಪ್ರಸಕ್ತ ಸಾಲಿನ ಐಪಿಎಲ್ ಆವೃತ್ತಿಯನ್ನು ಭರ್ಜರಿ ಗೆಲುವಿನನೊಂದಿಗೆ ಶುಭಾರಂಭ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜಸ್ಥಾನ ರಾಯಲ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದ ಸನ್'ರೈಸರ್ಸ್ ಕೇವಲ ಒಂದು ವಿಕೆಟ್ ಕಳೆದು ಕೊಂಡು ಭರ್ಜರಿ ಜಯ ದಾಖಲಿಸಿದೆ. ಶಿಖರ್ ಧವನ್(77*) ಹಾಗೂ ನಾಯಕ ಕೇನ್ ವಿಲಿಯಮ್ಸನ್(36*) ಎರಡನೇ ವಿಕೆಟ್'ಗೆ ಮುರಿಯದ 121 ರನ್'ಗಳ ಜತೆಯಾಟವಾಡುವ ಮೂಲಕ ಅನಾಯಾಸವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಸಂಜು ಸ್ಯಾಮ್ಸನ್(49) ಏಕಾಂಗಿ ಹೋರಾಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ 125/9 ರನ್'ಗಳ ಸಾಧಾರಣ ಮೊತ್ತ ದಾಖಲಿಸಿತ್ತು.

ಅರ್ಧಶತಕ ಬಾರಿಸಿದ ಶಿಖರ್ ಧವನ್ ಪಂದ್ಯಪುರುಷೋತ್ತಮ ಗೌರವಕ್ಕೆ ಭಾಜನರಾದರು.