ಅಜ್ಲಾನ್ ಶಾ ಟ್ರೋಫಿಯಲ್ಲಿ ಆತಿಥೇಯ ಮಲೇಷ್ಯಾ ತಂಡವನ್ನು ಮಣಿಸಿದ ಭಾರತ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 

ಇಫೋ[ಮಾ.27]: ಅಜ್ಲಾನ್‌ ಶಾ ಹಾಕಿ ಟೂರ್ನಿಯ 3ನೇ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ ವಿರುದ್ಧ ಭಾರತ 4-2 ಗೋಲುಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಮನ್’ಪ್ರೀತ್ ಸಿಂಗ್ ನೇತೃತ್ವದ ಹಾಕಿ ಟೀಂ ಇಂಡಿಯಾ ಫೈನಲ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 

ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಪರ 17ನೇ ನಿಮಿಷದಲ್ಲಿ ಸುಮಿತ್‌, 27ನೇ ನಿಮಿಷದಲ್ಲಿ ಸುಮಿತ್‌ ಕುಮಾರ್‌, 37ನೇ ನಿಮಿಷದಲ್ಲಿ ವರುಣ್‌ ಕುಮಾರ್‌ ಹಾಗೂ 58ನೇ ನಿಮಿಷದಲ್ಲಿ ಮನ್‌ದೀಪ್‌ ಸಿಂಗ್‌ ಗೋಲು ಬಾರಿಸಿದರು. 

Scroll to load tweet…

ಮಲೇಷ್ಯಾ ಪರ 21ನೇ ನಿಮಿಷದಲ್ಲಿ ರಾಜಿ ರಹೀಂ, 57ನೇ ನಿಮಿಷದಲ್ಲಿ ತೆಂಗ್ಕು ತಜಾವುದ್ದೀನ್‌ ಗೋಲು ಗಳಿಸಿದರು. 7 ಅಂಕಗಳೊಂದಿಗೆ ಭಾರತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಬುಧವಾರ ಭಾರತ ತಂಡ ಕೆನಡಾ ವಿರುದ್ಧ ಸೆಣಸಲಿದೆ.