ಇಂದಿ​ನಿಂದ ಸುಧೀ​ರ್‌​ಮ​ನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ

ಸುಧೀ​ರ್‌​ಮ​ನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ ಚೀನಾದಲ್ಲಿ ಆರಂಭ
ಚೀನಾದ ಸುಝೋದಲ್ಲಿ ಆರಂಭ​ವಾ​ಗಲಿರುವ ಬ್ಯಾಡ್ಮಿಂಟನ್ ಟೂರ್ನಿ
ಪಿ.ವಿ.​ಸಿಂಧು, ಪ್ರಣಯ್‌, ಶ್ರೀಕಾಂತ್‌ ಅವ​ರ​ನ್ನೊ​ಳ​ಗೊಂಡ ಭಾರತ ಚೊಚ್ಚಲ ಪದಕ ಗೆಲ್ಲುವ ನಿರೀ​ಕ್ಷೆ

Sudirman Cup begins in China all eyes on PV Sindhu kvn

ಸೂಝೊ​(​ಚೀ​ನಾ​): ಪ್ರತಿ​ಷ್ಠಿತ ಸುಧೀ​ರ್‌​ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ ಶನಿ​ವಾ​ರ​ದಿಂದ ಚೀನಾದ ಸುಝೋದಲ್ಲಿ ಆರಂಭ​ವಾ​ಗ​ಲಿದ್ದು, ಪಿ.ವಿ.​ಸಿಂಧು, ಪ್ರಣಯ್‌, ಶ್ರೀಕಾಂತ್‌ ಅವ​ರ​ನ್ನೊ​ಳ​ಗೊಂಡ ಭಾರತ ಚೊಚ್ಚಲ ಪದಕ ಗೆಲ್ಲುವ ನಿರೀ​ಕ್ಷೆ​ಯೊಂದಿಗೆ ಕಣ​ಕ್ಕಿ​ಳಿ​ಯ​ಲಿದೆ. 2011, 2017ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿದ್ದು ಭಾರತದ ಈವ​ರೆ​ಗಿನ ಶ್ರೇಷ್ಠ ಪ್ರದ​ರ್ಶನ. 

ಶನಿ​ವಾರ ‘ಸಿ’ ಗುಂಪಿನ ಮೊದಲ ಪಂದ್ಯ​ದಲ್ಲಿ ಬಲಿಷ್ಠ ಚೈನೀಸ್‌ ತೈಪೆ ವಿರುದ್ಧ ಸೆಣ​ಸಾ​ಡ​ಲಿದೆ. ಬಳಿಕ ಸೋಮ​ವಾರ ಮಲೇಷ್ಯಾ, ಬುಧ​ವಾರ ಆಸ್ಪ್ರೇ​ಲಿಯಾ ವಿರುದ್ಧ ಕಣ​ಕ್ಕಿ​ಳಿ​ಯ​ಲಿದೆ.

ತಾತ್ಕಾ​ಲಿಕ ಸಮಿ​ತಿ​ಗೆ ಕುಸ್ತಿ ಸಂಸ್ಥೆಯ ಪೂ​ರ್ಣ ಅಧಿ​ಕಾರ

ನವ​ದೆ​ಹ​ಲಿ: ಬ್ರಿಜ್‌​ಭೂ​ಷಣ್‌ ವಿರು​ದ್ಧದ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಭಾರತೀಯ ಒಲಿಂಪಿಕ್ಸ್‌ ಸಮಿತಿ(ಐಒಎ) ನೇಮಿಸಿರುವ ತಾತ್ಕಾಲಿಕ ಸಮಿತಿಗೆ ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ)ನ ಸಂಪೂರ್ಣ ಅಧಿಕಾರ ನೀಡ​ಲಾ​ಗಿದೆ. 

Karnataka Election Result 2023 ಭ್ರಷ್ಟಾಚಾರ, ಕಮಿಷನ್‌ ರಾಜಕೀಯಕ್ಕೆ ವಿರುದ್ದವಾಗಿ ಸಿಕ್ಕ ಗೆಲುವು: ನವಜೋತ್ ಸಿಂಗ್ ಸಿಧು

ಲೆಕ್ಕಪತ್ರ ಸೇರಿ ಎಲ್ಲಾ ದಾಖಲೆಗಳನ್ನು ಸಮಿತಿಗೆ ಹಸ್ತಾಂತರಿಸುವಂತೆ ಡಬ್ಲ್ಯುಎಫ್‌ಐ ಕಾರ‍್ಯದರ್ಶಿಗೆ ಐಒಎ ಸೂಚನೆ ನೀಡಿದ್ದು, ಡಬ್ಲ್ಯುಎಫ್‌ಐನ ಯಾವ ಪದಾ​ಧಿ​ಕಾ​ರಿಗೂ ಸಮಿ​ತಿ​ಯಲ್ಲಿ ಇನ್ನು ಯಾವುದೇ ಅಧಿ​ಕಾರ ಇಲ್ಲ ಎಂದು ತಿಳಿ​ಸಿ​ದೆ.

ಶೂಟಿಂಗ್‌ ವಿಶ್ವ​ಕಪ್‌: ಬೆಳ್ಳಿ ಗೆದ್ದ ಭಾರ​ತದ ಹೃದ​ಯ್‌

ಬಾಕು​(​ಅ​ಜ​ರ್‌​ಬೈ​ಜಾ​ನ್‌​): ಇಲ್ಲಿ ನಡೆ​ಯು​ತ್ತಿ​ರು​ವ ಐಎ​ಸ್‌​ಎ​ಸ್‌​ಎಫ್‌ ಶೂಟಿಂಗ್‌ ವಿಶ್ವ​ಕ​ಪ್‌​ನಲ್ಲಿ ಭಾರತ 3ನೇ ಪದಕ ಗೆದ್ದಿದೆ. ಶುಕ್ರ​ವಾರ ಪುರು​ಷರ ವಿಭಾ​ಗದ 10 ಮೀ. ಏರ್‌ ರೈಫ​ಲ್‌ ವಿಭಾ​ಗ​ದಲ್ಲಿ ಹೃದಯ್‌ ಹಜಾ​ರಿಕಾ ಬೆಳ್ಳಿ ಪದಕ ಗೆದ್ದರು. ಅರ್ಹತಾ ಸುತ್ತಿ​ನಲ್ಲಿ 630.3 ಅಂಕ ಸಂಪಾ​ದಿ​ಸಿದ್ದ ಹೃದಯ್‌ ಫೈನ​ಲ್‌​ನ​ಲ್ಲಿ 251.9 ಅಂಕ​ಗ​ಳೊಂದಿಗೆ 2ನೇ ಸ್ಥಾನಿ​ಯಾ​ದರು. 

ಹಂಗೇ​ರಿಯ ಜಲಾನ್‌ ಪೆಕ್ಲರ್‌ ವಿರುದ್ಧ ಹೃದಯ್‌ ಕೇವಲ 0.5 ಅಂತ​ರ​ದಲ್ಲಿ ಚಿನ್ನ ಪದಕ ವಂಚಿ​ತ​ರಾ​ದರು. ಇದು 21 ವರ್ಷದ ಹಜಾ​ರಿ​ಕಾಗೆ ಹಿರಿ​ಯರ ವಿಭಾ​ಗ​ದಲ್ಲಿ ಚೊಚ್ಚಲ ಪದಕ. ಮೊದ​ಲೆ​ರಡು ದಿನ ಭಾರತ ಕೂಟ​ದಲ್ಲಿ 1 ಚಿನ್ನ, 1 ಕಂಚು ಗೆದ್ದಿತ್ತು.

ಲಿಯೋನೆಲ್ ಮೆಸ್ಸಿ ಸೌದಿ ಕ್ಲಬ್‌ ಸೇರ್ಪಡೆ?

ಪ್ಯಾರಿ​ಸ್‌: ಅರ್ಜೆಂಟೀ​ನಾದ ಫುಟ್ಬಾಲ್‌ ತಾರೆ ಲಿಯೋ​ನೆಲ್‌ ಮೆಸ್ಸಿ ಮುಂದಿನ ಋುತು​ವಿ​ನಲ್ಲಿ ಸೌದಿ ಅರೇ​ಬಿಯಾದ ಲೀಗ್‌​ನಲ್ಲಿ ಆಡು​ವುದು ಬಹು​ತೇಕ ಖಚಿ​ತ​ವಾ​ಗಿದೆ ಎನ್ನ​ಲಾ​ಗಿದ್ದು, ಅಲ್‌ ಹಿಲಾಲ್‌ ಕ್ಲಬ್‌ ಜೊತೆ ಮಾತು​ಕತೆ ಪೂರ್ಣ​ಗೊ​ಳಿ​ಸಿ​ದ್ದಾರೆ ಎಂದು ಮಾಧ್ಯ​ಗ​ಳಲ್ಲಿ ವರ​ದಿ​ಯಾ​ಗಿದೆ. 

ಕ್ಲಬ್‌ ಮೆಸ್ಸಿಗೆ ವಾರ್ಷಿಕ 400 ಮಿಲಿಯನ್‌ ಯುರೋ (ಅಂದಾಜು 3611 ಕೋಟಿ ರು.) ಆಫರ್‌ ನೀಡಿದೆ ಎಂದು ಕಳೆದ ತಿಂಗಳು ವರದಿಯಾಗಿತ್ತು. ಸದ್ಯ ಅವರು ಫ್ರಾನ್ಸ್‌ನ ಫುಟ್ಬಾಲ್‌ ಕ್ಲಬ್‌ ಪ್ಯಾರಿಸ್‌ ಸೇಂಟ್‌ ಜರ್ಮೈನ್‌(ಪಿ​ಎ​ಸ್‌​ಜಿ) ಪರ ಆಡು​ತ್ತಿದ್ದು, ಈ ಋುತು​ವಿ​ನಲ್ಲಿ ಅವರ ಒಪ್ಪಂದ ಅಂತ್ಯ​ಗೊ​ಳ್ಳ​ಲಿದೆ. ಅವ​ರ ಒಪ್ಪಂದ ನವೀ​ಕ​ರಿ​ಸುವ ಸಾಧ್ಯತೆ ಕಡಿಮೆ ಎನ್ನ​ಲಾ​ಗುತ್ತಿದೆ.

Latest Videos
Follow Us:
Download App:
  • android
  • ios