ಶೂಟಿಂಗ್ ಮುಗಿದ ನಂತರವೂ ಇಂಗ್ಲೆಂಡ್'ನಲ್ಲಿಯೇ ಉಳಿದುಕೊಂಡಿರುವ ಸುದೀಪ್ ಸ್ಮರಣೀಯ ಹಾಗೂ ರೋಚಕ ಪಂದ್ಯವನ್ನು ಮಿಸ್ ಮಾಡಿಕೊಳ್ಳದೆ ತಾವು ಸಾಕ್ಷಿಯಾಗುವುದಾಗಿ ಟ್ವಿಟರ್'ನಲ್ಲಿ ಬರೆದುಕೊಂಡಿದ್ದಾರೆ.

ಇಂಗ್ಲೆಂಡ್'ನಲ್ಲಿ ನಡೆಯಲಿರುವ ಟೀಂ ಇಂಡಿಯಾ ವನಿತೆಯರ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮಹಿಳಾ ವಿಶ್ವಕಪ್'ನ ಫೈನಲ್ ಪಂದ್ಯವನ್ನು ವೀಕ್ಷಿಸುವುದಾಗಿ ಸ್ಯಾಂಡಲ್'ವುಡ್ ಸ್ಟಾರ್ ಕಿಚ್ಚ ಸುದೀಪ್ ಟ್ವಿಟರ್'ನಲ್ಲಿ ಹೇಳಿಕೊಂಡಿದ್ದಾರೆ. ಸುದೀಪ್ ಹಾಗೂ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದ ಶೂಟಿಂಗ್ ಇತ್ತೀಚಿಗಷ್ಟೆ ಇಂಗ್ಲೆಂಡ್'ನಲ್ಲಿ ಮುಗಿದಿತ್ತು.

ಶೂಟಿಂಗ್ ಮುಗಿದ ನಂತರವೂ ಇಂಗ್ಲೆಂಡ್'ನಲ್ಲಿಯೇ ಉಳಿದುಕೊಂಡಿರುವ ಸುದೀಪ್ ಸ್ಮರಣೀಯ ಹಾಗೂ ರೋಚಕ ಪಂದ್ಯವನ್ನು ಮಿಸ್ ಮಾಡಿಕೊಳ್ಳದೆ ತಾವು ಸಾಕ್ಷಿಯಾಗುವುದಾಗಿ ಟ್ವಿಟರ್'ನಲ್ಲಿ ಬರೆದುಕೊಂಡಿದ್ದಾರೆ. ಸುದೀಪ್ ಮಾತ್ರವಲ್ಲದೆ ಹಲವಾರು ಗಣ್ಯರು ಸಹ ಅದ್ಭುತ ಪಂದ್ಯವನ್ನು ವೀಕ್ಷಿಸಲು ತೆರಳುತ್ತಿದ್ದಾರೆ.

Scroll to load tweet…