ಭಾರತ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಶಾಕ್. ಸೋಲಿನ ಬೆನ್ನಲ್ಲೇ, ಆಂಗ್ಲರಿಗೆ ಐಸಿಸಿ ತಕ್ಕ ಪಾಠ ಕಲಿಸಿದೆ. ಅಷ್ಟಕ್ಕೂ ಇಂಗ್ಲೆಂಡ್ ತಂಡಕ್ಕೆ ಐಸಿಸಿ ನೀಡಿದ ಶಾಕ್ ಏನು? ಇಲ್ಲಿದೆ.
ನಾಟಿಂಗ್‌ಹ್ಯಾಮ್(ಆ.22): ಭಾರತ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ವಿಶ್ವಾಸದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ 3ನೇ ಟೆಸ್ಟ್ ಪಂದ್ಯದಲ್ಲಿ ಹಿನ್ನಡೆಯಾಗಿದೆ. ಟೀಂ ಇಂಡಿಯಾ ವಿರುದ್ಧ 203 ರನ್ ಸೋಲು ಕಂಡ ಇಂಗ್ಲೆಂಡ್ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.
3ನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಔಟ್ ಮಾಡಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅನುಚಿತ ವರ್ತನೆ ತೋರಿದ್ದರು. ಪಂತ್ ವಿಕೆಟ್ ಕಬಳಿಸಿದ ಬ್ರಾಡ್, ನೇವಾಗಿ ಪಂತ್ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದರು.
ಐಸಿಸಿ ಕೋಡ್ ಆಫ್ 2.1.7 ನಿಮಯ ಉಲ್ಲಂಘಿಸಿದ ಸ್ಟುವರ್ಟ್ ಬ್ರಾಡ್‌ಗೆ ಐಸಿಸಿ ಶಿಕ್ಷೆ ವಿಧಿಸಿದೆ. ಪಂದ್ಯದ ಶೇಕಡಾ 15ರಷ್ಟು ಶುಲ್ಕವನ್ನ ದಂಡವಾಗಿ ಪಾವತಿಸುವಂತೆ ಐಸಿಸಿ ಹೇಳಿದೆ. ಐಸಿಸಿ ನಿರ್ಧಾರವನ್ನ ಟ್ವಿಟರಿಗರು ಸ್ವಾಗತಿಸಿದ್ದಾರೆ.
