ಜೂನ್ 1ರಿಂದ ತವರಿನಲ್ಲೇ ಜರುಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸ್ಟೋಕ್ಸ್ ಗಾಯದಿಂದ ಚೇತರಿಸಿಕೊಂಡಿರುವುದು ಆಂಗ್ಲ ಪಡೆಯ ಬಲವನ್ನು ಹೆಚ್ಚಿಸಿದೆ.

ಲಂಡನ್(ಮೇ.26): ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಎದುರಾಗಿದ್ದ ಆತಂಕ ದೂರಾಗಿದೆ.

ಹೌದು ಬೆನ್ ಸ್ಟೋಕ್ಸ್ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದು, ಪ್ರತಿಷ್ಠಿತ ಪಂದ್ಯಾವಳಿಗೆ ತಯಾರಿಯ ಸಲುವಾಗಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಆಡಲು ಅನುಮತಿ ನೀಡಲಾಗಿದೆ.

ಲೀಡ್ಸ್‌'ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದ ವೇಳೆ ಸ್ಟೋಕ್ಸ್ ಎಡಗಾಲಿನ ಮಂಡಿ ಗಾಯಕ್ಕೆ ತುತ್ತಾಗಿದ್ದರು.

ಇಂದು ನಡೆದ ಅಭ್ಯಾಸದ ವೇಳೆ ಬೌಲಿಂಗ್, ಬ್ಯಾಟಿಂಗ್ ಹಾಗೂ ಕ್ಷೇತ್ರರಕ್ಷಣೆ ನಡೆಸಿದ ಸ್ಟೋಕ್ಸ್, ಸಂಪೂರ್ಣವಾಗಿ ಚೇತರಿಸಿಕೊಂಡಿರುವುದು ಸ್ಪಷ್ಟವಾಯಿತು.

ಪ್ರಸಕ್ತ ಸಾಲಿನ ಐಪಿಎಲ್'ನಲ್ಲಿ ರೈಸಿಂಗ್ ಪುಣೆ ಸೂಪರ್'ಜೈಂಟ್ ತಂಡವನ್ನು ಪ್ರತಿನಿಧಿಸಿದ್ದ ಸ್ಟೋಕ್ಸ್, ಗಮನಾರ್ಹ ಪ್ರದರ್ಶನ ತೋರುವಲ್ಲಿ ಸಫಲರಾಗಿದ್ದರು.

ಜೂನ್ 1ರಿಂದ ತವರಿನಲ್ಲೇ ಜರುಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸ್ಟೋಕ್ಸ್ ಗಾಯದಿಂದ ಚೇತರಿಸಿಕೊಂಡಿರುವುದು ಆಂಗ್ಲ ಪಡೆಯ ಬಲವನ್ನು ಹೆಚ್ಚಿಸಿದೆ.