Asianet Suvarna News Asianet Suvarna News

ಸ್ಮಿತ್,ರಹಾನೆ ಅಬ್ಬರಕ್ಕೆ ಮುಂಬೈ ತತ್ತರ: ಮೊದಲ ಪಂದ್ಯದಲ್ಲೆ ಪುಣೆಗೆ ಗೆಲುವು

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್ ನೀಡಿದ್ದ 185 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಪುಣೆ ಸೂಪರ್‌ಜೈಂಟ್  ಅಂತಿಮ ಓವರ್'ನ ಕೊನೆಯ ಎಸತವಿರುವಾಗಲೆ ಜಯಗಳಿಸಿತು.

Steven Smith powers Pune Supergiant to a thrilling win
  • Facebook
  • Twitter
  • Whatsapp

ಪುಣೆ(ಏ.06): ನಾಯಕ ಸ್ಟೀವನ್ ಸ್ಮಿತ್ ಹಾಗೂ ಅಜಿಂಕ್ಯ ರಹಾನೆ ಅವರ  ಸ್ಫೋಟಕ  ಬ್ಯಾಟಿಂಗ್ ನೆರವಿನಿಂದ ಪುಣೆ ಸೂಪರ್‌ಜೈಂಟ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 7 ವಿಕೆಟ್'ಗಳ  ಅಂತರದಿಂದ ಗೆಲುವು ಸಾಧಿಸಿದೆ.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್ ನೀಡಿದ್ದ 185 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಪುಣೆ ಸೂಪರ್‌ಜೈಂಟ್  ಅಂತಿಮ ಓವರ್'ನ ಕೊನೆಯ ಎಸತವಿರುವಾಗಲೆ ಜಯಗಳಿಸಿತು.

ಗುರಿ ಬೆನ್ನತ್ತಿದ ಪುಣೆಗೆ ಅಜಿಂಕ್ಯ ರಹಾನೆ (60 ರನ್, 34 ಎಸೆತ, 6 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಮೂಲಕ ಭದ್ರ ತಳಪಾಯ ಹಾಕಿಕೊಟ್ಟರು. ಮಾಯಂಕ್ ಅಗರ್'ವಾಲ್ ಬೇಗ ಔಟಾದರೂ ನಂತರ ಬ್ಯಾಟಿಂಗ್ ಆರಂಭಿಸಿದ ನಾಯಕ ಸ್ಟಿವನ್ ಸ್ಮಿತ್ ಬಿರುಸಿನ ಆಟವಾಡಿ 54 ಎಸತಗಳಲ್ಲಿ  3 ಅದ್ಭುತ ಸಿಕ್ಸ್'ರ್ ಹಾಗೂ 7 ಆಕರ್ಷಕ ಬೌಂಡರಿಯೊಂದಿಗೆ 84 ರನ್ ಗಳಿಸಿ ಅಜೇಯರಾಗಿ ಉಳಿದರು. ಸ್ಟೋಕ್ಸ್ ಸಹ 14 ಚಂಡುಗಳಲ್ಲಿ 3 ಬೌಂಡರಿಗಳೊಂದಿಗೆ ಉತ್ತಮ 21 ರನ್ ಗಳಿಸಿ ಔಟಾದರು. ಕೊನೆಯ 5 ಓವರ್ ಇರುವಾಗ ಆಟಕ್ಕಿಳಿದ ತಂಡದ ಮಾಜಿ ನಾಯಕ ಧೋನಿ ಸ್ಮಿತ್'ಗೆ ಜೊತೆಯಾಗಿ  ಒಂದು ಬೌಂಡರಿಯೊಂದಿಗೆ 12 ರನ್ ಗಳಿಸಿದರು.

ಕೊನೆಯ ಓವರ್'ನಲ್ಲಿ ಪಂದ್ಯ ಎರಡೂ ತಂಡಗಳ ಪರ ವಾಲಿತ್ತು ಆದರೆ ಸ್ಮಿತ್ ಅದ್ಭುತ 2 ಸಿಕ್ಸ್'ರ್ ಸಿಡಿಸುವ ಮೂಲಕ ವಿಜಯ ಲಕ್ಷ್ಮಿಯನ್ನು ಪುಣೆಗೆ ಒಲಿಸಿದರು.

ದಿಂಡಾ ದಂಡಿಸಿದ ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಪಾಂಡ್ಯ ತಂಡಕ್ಕೆ ಆಸರೆಯಾದದ್ದರ ಲವಾಗಿ ಪುಣೆ ಗೆಲುವಿಗೆ ಮುಂಬೈ 185 ರನ್ ಗುರಿ ನೀಡಿತು. 16ನೇ ಓವರ್‌ನಲ್ಲಿ ಪಾಂಡ್ಯ ಕ್ರೀಸ್‌ಗಿಳಿದಾಗ ತಂಡದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 125 ರನ್. 19ನೇ ಓವರ್ ಮುಕ್ತಾಯದ ವರೆಗೂ ಶಾಂತವಾಗಿದ್ದ ಪಾಂಡ್ಯ ಬ್ಯಾಟ್, ಕೊನೆ ಓವರ್‌ನಲ್ಲಿ ಘರ್ಜಿಸಿತು. ಅಶೋಕ್ ದಿಂಡಾ ಎಸೆದ 20ನೇ ಓವರ್‌ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್‌ಗಟ್ಟಿದ ಪಾಂಡ್ಯ, 4ನೇ ಎಸೆತದಲ್ಲಿ ಬೌಂಡರಿ ಕದ್ದರು. 5ನೇ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸರ್ ಸಿಡಿಸಿದ ಅವರಿಗೆ ಕೊನೇ ಎಸೆತದಲ್ಲಿ ಇನ್ನೊಂದು ಬೌಂಡರಿ ಬಾರಿಸುವ ಅವಕಾಶ ಕೈತಪ್ಪಿತು. ಕೊನೆಯ ಓವರ್‌ನಲ್ಲಿ ಹರಿದುಬಂದ 30 ರನ್‌ಗಳು ಮುಂಬೈ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿತು. ಕೊನೆಯ ಓವರ್‌ನಲ್ಲಿ 29 ರನ್ ಸೇರಿ ಕೇವಲ 15 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ನೆರವಿನೊಂದಿಗೆ 35 ರನ್ ಸಿಡಿಸಿದ ಪಾಂಡ್ಯ ಅಜೇಯರಾಗುಳಿದರು.

ಉತ್ತಮ ಆಟವಾಡಿ ಗೆಲುವು ತಂದುಕೊಟ್ಟ ಪುಣೆ ತಂಡದ ನಾಯಕ ಸ್ಟಿವನ್ ಸ್ಮಿತ್ ಪಂದ್ಯ ಪುರುಶೋತ್ತಮ ಪುರಸ್ಕಾರರಾದರು.

ಸ್ಕೋರ್

ಮುಂಬೈ ಇಂಡಿಯನ್ಸ್: 184/8 (20/20 ov)
ರೈಸಿಂಗ್ ಪುಣೆ ಜೈಂಟ್: 187/3(19.5/20)

ಪಂದ್ಯ ಪುರುಶೋತ್ತಮ: ಸ್ಟೀವನ್ ಸ

Follow Us:
Download App:
  • android
  • ios