ರಾಹುಲ್ ಮೊದಲ ಇನಿಂಗ್ಸ್'ನಲ್ಲಿ 90 ರನ್ ಬಾರಿಸಿದ್ದರೆ, ಎರಡನೇ ಇನಿಂಗ್ಸ್'ನಲ್ಲಿ 51 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದು ಮಾತ್ರವಲ್ಲದೇ ಟೆಸ್ಟ್ ಕ್ರಿಕೆಟ್'ನಲ್ಲಿ ಒಂದು ಸಾವಿರ ರನ್'ಗಳನ್ನೂ ಪೂರೈಸಿದರು.
ಬೆಂಗಳೂರು(ಮಾ.06): ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್'ಗೆ ಉತ್ತಮವಾಗಿ ಆಡುತ್ತಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಪೆವಿಲಿಯನ್ ಸೇರಬೇಕಾಯಿತು.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್'ನ ಮೂರನೇ ದಿನದಾಟದ ವೇಳೆ ಅರ್ಧಶತಕ ಬಾರಿಸಿ ಸಂಭ್ರಮದಲ್ಲಿದ್ದ ರಾಹುಲ್ ಮಾಡಿದ ಸಣ್ಣ ಎಡವಟ್ಟಿನಿಂದ ಸ್ಮಿತ್'ಗೆ ಕ್ಯಾಚ್ ನೀಡಿ ಹೊರನಡೆಯಬೇಕಾಯಿತು.
ರಾಹುಲ್ ಮೊದಲ ಇನಿಂಗ್ಸ್'ನಲ್ಲಿ 90 ರನ್ ಬಾರಿಸಿದ್ದರೆ, ಎರಡನೇ ಇನಿಂಗ್ಸ್'ನಲ್ಲಿ 51 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದು ಮಾತ್ರವಲ್ಲದೇ ಟೆಸ್ಟ್ ಕ್ರಿಕೆಟ್'ನಲ್ಲಿ ಒಂದು ಸಾವಿರ ರನ್'ಗಳನ್ನೂ ಪೂರೈಸಿದರು.