ನಾನು ಇಲಾಖೆ ಜವಾಬ್ದಾರಿ ಹೊತ್ತ ಬಳಿಕ ಇಲಾಖೆಗೆ ಸಿಗುವ ಅನುದಾನದ 265 ಕೋಟಿ ರುಪಾಯಿಗೆ ಏರಿಕೆಯಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಬೆಂಗಳೂರು(ಸೆ.14): ರಾಜ್ಯದ 30 ಕ್ರೀಡಾ ಶಾಲೆಗಳಿಗೆ ಶೀಘ್ರ ಕೋಚ್'ಗಳ ನೇಮಕ ಮಾಡಲು ಕ್ರಮ ಕೈಗೊಳ್ಳುವುದಾಗಿ ಯುವಜನ ಕ್ರೀಡಾ ಮತ್ತು ಬಂದರು ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 30 ಕ್ರೀಡಾ ಶಾಲೆಗಳಲ್ಲಿ ಕೋಚ್‌ಗಳ ಕೊರತೆ ಇದೆ. ಅಗತ್ಯವಿರುವಷ್ಟು ಕೋಚ್'ಗಳ ನೇಮಕಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಇದರ ಜತೆಗೆ ಒಂದು ಪ್ರತಿಭಾನ್ವಿತ ಕ್ರೀಡಾಪಟುಗಳ ಶೋಧಕ್ಕಾಗಿ ಯೋಜನೆ ರೂಪಿಸಲಾಗುವುದು.
ನಾನು ಇಲಾಖೆ ಜವಾಬ್ದಾರಿ ಹೊತ್ತ ಬಳಿಕ ಇಲಾಖೆಗೆ ಸಿಗುವ ಅನುದಾನದ 265 ಕೋಟಿ ರುಪಾಯಿಗೆ ಏರಿಕೆಯಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.