ಸ್ಪೋರ್ಟ್ಸ್‌‌ ಬ್ರಾಡ್‌ಕಾಸ್ಟಿಂಗ್‌ ಸಿಗ್ನಲ್‌ ನಿಯಮ 2007ರ ಪ್ರಕಾರ ಎಲ್ಲ ಖಾಸಗಿ ಪ್ರಸಾರಕರು ಪ್ರಸಾರ ಭಾರತೀಯೊಂದಿಗೆ ತಮ್ಮ ನೇರ ಪ್ರಸಾರದ ಹಕ್ಕು ಹಂಚಿಕೊಳ್ಳಬಹುದಾಗಿದೆ. 

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 11ನೇ ಆವೃತ್ತಿ ಏಪ್ರಿಲ್‌ 7ರಿಂದ ಆರಂಭಗೊಳ್ಳಲಿದ್ದು, ಸ್ಟಾರ್‌ ಇಂಡಿಯಾದಲ್ಲಿ ಅದರ ಲೈವ್‌ ಕವರೇಜ್‌ ಆಗಿಲಿದೆ. ಇದರ ಮಧ್ಯೆ ದೂರದರ್ಶನದಲ್ಲಿ ಈ ಸಲದ ಐಪಿಎಲ್‌‌ ಪ್ರಸಾರವಾಗಲಿದೆ. ಐಪಿಎಲ್‌ನ ಉದ್ಘಾಟನಾ ಮತ್ತು ಸಮರೂಪ ಸಮಾರಂಭ, ಕೆಲವೊಂದು ಹೈವೊಲ್ಟೇಜ್‌ ಪಂದ್ಯಗಳ ನೇರ ಪ್ರಸಾರ ದೂರದರ್ಶನದಲ್ಲಿ ಪ್ರಸಾರವಾಗಲಿವೆ. ಸ್ಟಾರ್‌ ಇಂಡಿಯಾ 16,347.50 ಕೋಟಿ ನೀಡಿ ಐಪಿಎಲ್‌ನ ಪ್ರಸಾರ ಹಕ್ಕು ಪಡೆದುಕೊಂಡಿದೆ. ಸ್ಪೋರ್ಟ್ಸ್‌‌ ಬ್ರಾಡ್‌ಕಾಸ್ಟಿಂಗ್‌ ಸಿಗ್ನಲ್‌ ನಿಯಮ 2007ರ ಪ್ರಕಾರ ಎಲ್ಲ ಖಾಸಗಿ ಪ್ರಸಾರಕರು ಪ್ರಸಾರ ಭಾರತೀಯೊಂದಿಗೆ ತಮ್ಮ ನೇರ ಪ್ರಸಾರದ ಹಕ್ಕು ಹಂಚಿಕೊಳ್ಳಬಹುದಾಗಿದೆ. ಹೀಗಾಗಿ ಪ್ರಸಾರ ಭಾರತಿಯೊಂದಿಗೆ ಸ್ಟಾರ್‌ ಇಂಡಿಯಾ ತನ್ನ ಹಕ್ಕು ಹಂಚಿಕೆ ಮಾಡಿಕೊಂಡಿದೆ