16,347 ಕೋಟಿ ರೂ'ಗಳನ್ನು ಬಿಡ್ ಮಾಡುವ ಮೂಲಕ 10 ವರ್ಷಗಳ ನಂತರ ಮೊದಲ ಬಾರಿಗೆ ಸ್ಟಾರ್ ಸಮೂಹದ ಚಾನಲ್'ಗಳಲ್ಲಿ ಪ್ರಸಾರವಾಗಲಿದೆ.

ಮುಂಬೈ(ಸೆ.04): ಹತ್ತು ವರ್ಷಗಳ ನಂತರ ಸೋನಿ ಪಿಚ್ಚರ್ಸ್'ನಿಂದ ಸ್ಟಾರ್ ಟಿವಿಯಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರವಾಗಲಿದೆ.

16,347 ಕೋಟಿ ರೂ'ಗಳನ್ನು ಬಿಡ್ ಮಾಡುವ ಮೂಲಕ 10 ವರ್ಷಗಳ ನಂತರ ಮೊದಲ ಬಾರಿಗೆ ಸ್ಟಾರ್ ಸಮೂಹದ ಚಾನಲ್'ಗಳಲ್ಲಿ ಪ್ರಸಾರವಾಗಲಿದೆ. ಮುಂಬೈ'ನಲ್ಲಿ ನಡೆದ ಬಿಡ್ ಪ್ರಕ್ರಿಯೆಯಲ್ಲಿ 2018-2022ರವರೆಗೆ 5 ವರ್ಷಗಳ ಕಾಲ ಭಾರತೀಯ ಉಪ ಖಂಡದ ಪ್ರಸಾರದ ಹಕ್ಕು'ಗಳನ್ನು ಪಡೆದುಕೊಂಡಿದೆ.

ಸೋನಿ ಪಿಚರ್ಸ್ 8200 ಕೋಟಿ ಬಿಡ್ ಮಾಡುವುದರೊಂದಿಗೆ 10 ವರ್ಷಗಳ ವರೆಗೆ ಪ್ರಸಾರದ ಹಕ್ಕನ್ನು ಪಡೆದುಕೊಂಡಿತ್ತು. ಜಾಗತಿಕ ಮಾಧ್ಯಮ ಪ್ರಸಾರದ ಹಕ್ಕನ್ನು 2015 -2018ರವರೆಗೆ ನೋವಿ ಡಿಜಿಟಲ್ 302.2 ಕೋಟಿ ರೂ. ಬಿಡ್'ನೊಂದಿಗೆ ಪಡೆದುಕೊಂಡಿದೆ. ವಿಶ್ವ ಕ್ರೀಡಾ ರಂಗದಲ್ಲಿ ಫುಟ್'ಬಾಲ್ ಫುಟ್'ಬಾಲ್ ಬಿಟ್ಟರೆ ಇಷ್ಟು ದೊಡ್ಡ ಮೊತ್ತವನ್ನು ಬಿಡ್ ಮಾಡಿ ಕೊಂಡುಕೊಂಡಿರುವ ಕ್ರೀಡೆ ಐಪಿ'ಎಲ್ ಆಗಿದೆ

ಬಿಡ್'ನಲ್ಲಿ ಅಮೆಜಾನ್, ತಾಜ್ ಟಿವಿ, ಟೈಮ್ಸ್ ಇಂಟರ್'ನೆಟ್, ಇಎಸ್'ಪಿಎನ್ ಟ್ವಿಟರ್, ಫೇ'ಸ್'ಬುಕ್ ಸೇರಿದಂತೆ 14 ಕಂಪನಿಗಳು ಭಾಗವಹಿಸಿದ್ದವು.