ಇಂಗ್ಲೆಂಡ್ ಪ್ರವಾಸದಲ್ಲಿರು ಟೀಂ ಇಂಡಿಯಾ ಟಿ20 ಸರಣಿ ಗೆಲ್ಲೋ ಮೂಲಕ ಆಂಗ್ಲರಿಗೆ ನಡುಕು ಹುಟ್ಟಿಸಿದ್ದಾರೆ. ಇದೀಗ ಏಕದಿನ ಸರಣಿಯಲ್ಲೂ ಕೊಹ್ಲಿ ಬಾಯ್ಸ್ ಗೆಲುವಿನ ವಿಶ್ವಾಸದಲ್ಲಿದೆ. ಆದರೆ ಟೀಂ ಇಂಡಿಯಾವನ್ನ ಮಣಿಸಲು ಇಂಗ್ಲೆಂಡ್ ತಂಡ ಹೊಸ ಯೋಜನೆ ರೂಪಿಸಿದೆ. ಆಂಗ್ಲರ ನೂತನ ಪ್ಲಾನ್ ಏನು?ಇಲ್ಲಿದೆ ವಿವರ.
ಲಂಡನ್(ಜು.11): ಟೀಂ ಇಂಡಿಯಾವನ್ನ ಮಣಿಸಲು ಇಂಗ್ಲೆಂಡ್ ಕ್ರಿಕೆಟಿಗರು ಇದೀಗ ಹೊಸ ಪ್ಲಾನ್ ರೂಪಿಸಿದ್ದಾರೆ. ಇಷ್ಟು ದಿನ ಐಪಿಎಲ್ ಟೂರ್ನಿಯಿಂದ ದೂರ ಸರಿದಿದ್ದ ಬಹುತೇಕ ಇಂಗ್ಲೆಂಡ್ ಕ್ರಿಕೆಟಿಗರು ಇದೀಗ ಐಪಿಎಲ್ ಟೂರ್ನಿ ಆಡಲು ಬಯಸಿದ್ದಾರೆ.
ಭಾರತದಲ್ಲಿ ಐಪಿಎಲ್ ಆಡೋ ಮೂಲಕ ಟೀಂ ಇಂಡಿಯಾ ಕ್ರಿಕೆಟಿಗರ ಪ್ಲಸ್ ಹಾಗೂ ವೀಕ್ನೆಸ್ ತಿಳಿದುಕೊಳ್ಳಲು ಇಂಗ್ಲೆಂಡ್ ಕ್ರಿಕೆಟಿಗರು ಸಜ್ಜಾಗಿದ್ದಾರೆ. ಹೀಗಾಗಿ ಇಷ್ಟು ದಿನ ಐಪಿಎಲ್ ಕ್ರಿಕೆಟ್ ಟೂರ್ನಿಯಿಂದ ಬಹುತೇಕ ಇಂಗ್ಲೆಂಡ್ ದೂರ ಉಳಿದಿದ್ದರು. ಇದೀಗ ಐಪಿಎಲ್‌ಗೆ ಮರಳಲು ಬಯಸಿದ್ದಾರೆ.
ಐಪಿಎಲ್ ಟೂರ್ನಿ ಆಡಿದರೆ, ನನ್ನ ಬೌಲಿಂಗ್ ಮತ್ತಷ್ಟು ಪರಿಣಾಮಕಾರಿಯಾಗಲಿದೆ. ಈ ಮೂಲಕ ಟೀಂ ಇಂಡಿಯಾ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯ ಎಂದು ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಸ್ಕೈ ಸ್ಪೋರ್ಟ್ಸ್ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಟಿ20 ಸರಣಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ನನ್ನ ಸ್ಪಿನ್ ದಾಳಿಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಐಪಿಎಲ್ ಟೂರ್ನಿ ಆಡೋ ಮೂಲಕ ಮತ್ತಷ್ಟು ಪರಿಣಾಮಕಾರಿ ಬೌಲಿಂಗ್ ದಾಳಿ ಮಾಡಲು ಬಯಸಿದ್ದೇನೆ ಎಂದು ರಶೀದ್ ಹೇಳಿದ್ದಾರೆ.
