ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್, ರಾಫೇಲ್ ನಡಾಲ್ ಹಾಗೂ ಆ್ಯಂಡಿ ಮರ್ರೆ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಯುಎಸ್ ಓಪನ್ ಟೂರ್ನಿಯು ಆಗಸ್ಟ್ 28ರಿಂದ ಸೆಪ್ಟೆಂಬರ್ 10ರ ವರೆಗೆ ನಡೆಯಲಿದೆ.  

ಪ್ಯಾರಿಸ್(ಆ.05): ಹಾಲಿ ಯುಎಸ್ ಓಪನ್ ಟೆನಿಸ್ ಗ್ರ್ಯಾಂಡ್ ಸ್ಲಾಂ ಚಾಂಪಿಯನ್ ಸ್ಟ್ಯಾನಿಸ್ಲಾಸ್ ವಾವ್ರಿಂಕಾ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಪ್ರಸಕ್ತ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಿಸ್ ತಾರೆ ವಾವ್ರಿಂಕಾ, 2017ನೇ ಆವೃತ್ತಿಯ ಯುಎಸ್ ಓಪನ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ವಾವ್ರಿಂಕಾ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಅವಕಾಶದಿಂದ ವಂಚಿತರಾಗಿದ್ದಾರೆ.

ಈ ಬಾರಿ ವಾವ್ರಿಂಕಾ ಕೂಡಾ ಭಾಗವಹಿಸದೇ ಇರುವುದರಿಂದ ಈ ಬಾರಿಯ ಪಂದ್ಯಾವಳಿಯಲ್ಲಿ ವಿನ್ನರ್ ಹಾಗೂ ರನ್ನರ್ ಅಪ್ ಇಬ್ಬರೂ ಇಲ್ಲದೇ ಟೂರ್ನಿ ನಡೆಯಲಿದೆ. ಈಗಾಗಲೆ ಕಳೆದ ಬಾರಿಯ ರನ್ನರ್ ಅಪ್ ನೋವಾಕ್ ಜೋಕೋವಿಚ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್, ರಾಫೇಲ್ ನಡಾಲ್ ಹಾಗೂ ಆ್ಯಂಡಿ ಮರ್ರೆ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಯುಎಸ್ ಓಪನ್ ಟೂರ್ನಿಯು ಆಗಸ್ಟ್ 28ರಿಂದ ಸೆಪ್ಟೆಂಬರ್ 10ರ ವರೆಗೆ ನಡೆಯಲಿದೆ.