ಲಂಕಾ ವಿರುದ್ದ ಸರಣಿ ಗೆದ್ದ ಇಂಗ್ಲೆಂಡ್ ಸಂಭ್ರಮಾಚರಣೆ ಇನ್ನು ನಿಂತಿಲ್ಲ. ಇದೇ ಮೊದಲ ಬಾರಿಗೆ ಏಷ್ಯಾ ನೆಲದಲ್ಲಿ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಇಂಗ್ಲೆಂಡ್ ಆಟಗಾರರ ಸೆಲೆಬ್ರೇಷನ್ ಹೇಗಿದೆ? ಇಲ್ಲಿದೆ.
ಕೊಲೊಂಬೊ(ನ.27): ಏಷ್ಯಾ ನೆಲದಲ್ಲಿ ಮೊದಲ ಬಾರಿಗೆ ಕ್ಲೀನ್ ಸ್ವೀಪ್ ಮಾಡಿದ ಇಂಗ್ಲೆಂಡ್ ತಂಡದ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಶ್ರೀಲಂಕಾ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದ ಇಂಗ್ಲೆಂಡ್ ವಿಶಿಷ್ಠ ರೀತಿಯಲ್ಲಿ ಆಚರಿಸಿದೆ.
ಅಂತಿಮ ಟೆಸ್ಟ್ ಪಂದ್ಯದದ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂಗೆ ಆಗಮಿಸಿದ ಇಂಗ್ಲೆಂಡ್ ತಂಡ ಸಂಭ್ರಮ ಆಚರಣೆ ಶುರುಮಾಡಿತು. ಈ ವೇಳೆ ನಾಯಕ ಜೋ ರೂಟ್ ಗಿಟಾರ್ ನುಡಿಸೋ ಮೂಲಕ ಎಲ್ಲರ ಗಮನಸೆಳೆದರು.
ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ 211 ರನ್, ದ್ವಿತೀಯ ಪಂದ್ಯದಲ್ಲಿ 57 ಹಾಗೂ ತೃತೀಯ ಪಂದ್ಯದಲ್ಲಿ 47 ರನ್ ಗೆಲುವು ಸಾಧಿಸಿತು. ಏಷ್ಯಾ ನೆಲದಲ್ಲಿ ಬರೋಬ್ಬರಿ 55 ವರ್ಷಗಳ ಬಳಿಕ ಇಂಗ್ಲೆಂಡ್ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
