2009ರಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆಗ ಲಾಹೋರ್'ನ ಗಡಾಫಿ ಮೈದಾನದ ಬಳಿ ಶ್ರೀಲಂಕಾ ಆಟಗಾರರು ಬಸ್'ನಲ್ಲಿ ಪ್ರಯಾಣಿಸುತ್ತಿದ್ದಾಗ 12 ಮಂದಿ ಉಗ್ರರು ಬಸ್ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ಕೊಲಂಬೊ(ಅ.09): ಲಾಹೋರ್‌'ನಲ್ಲಿ ಟಿ20 ಸರಣಿ ಆಡಲು ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಿರುವ ಶ್ರೀಲಂಕಾ ಕ್ರಿಕೆಟ್ ತಂಡ, ಭದ್ರತೆ ಸಮಸ್ಯೆ ದೃಷ್ಟಿಯಿಂದ ಪ್ರವಾಸವನ್ನು ರದ್ದುಗೊಳಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶ್ರೀಲಂಕಾ ಕ್ರಿಕೆಟ್ ಸಂಸ್ಥೆ, ಪಾಕಿಸ್ತಾನದಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವ ವಿವರ ಹಾಗೂ ಪ್ರವಾಸ ಕೈಗೊಳ್ಳುವುದು ಸೂಕ್ತವೇ ಎಂದು ಐಸಿಸಿಯನ್ನು ಕೇಳಿದೆ. ‘ಇದೇ ವಾರದಲ್ಲಿ ಐಸಿಸಿ ಅಧಿಕಾರಿಗಳನ್ನು ಭೇಟಿ ಮಾಡಿ, ಪಾಕಿಸ್ತಾನದಲ್ಲಿ ಪರಿಸ್ಥಿತಿ ಹೇಗಿದೆ ಎಂದು ವಿಚಾರಿಸಲಿದ್ದೇವೆ. ಅವರಿಂದ ಧನಾತ್ಮಕ ಪ್ರತಿಕ್ರಿಯೆ ದೊರೆತಲ್ಲಿ ಲಾಹೋರ್‌ಗೆ ತೆರಳಲು ಒಪ್ಪಿಗೆ ನೀಡಲಿದ್ದೇವೆ’ ಎಂದು ಲಂಕಾ ಕ್ರಿಕೆಟ್ ಸಂಸ್ಥೆ ಹೇಳಿದೆ.

2009ರಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆಗ ಲಾಹೋರ್'ನ ಗಡಾಫಿ ಮೈದಾನದ ಬಳಿ ಶ್ರೀಲಂಕಾ ಆಟಗಾರರು ಬಸ್'ನಲ್ಲಿ ಪ್ರಯಾಣಿಸುತ್ತಿದ್ದಾಗ 12 ಮಂದಿ ಉಗ್ರರು ಬಸ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ 6 ಅಧಿಕಾರಿಗಳು ಹಾಗೂ ಇಬ್ಬರು ನಾಗರಿಕರು ಮೃತ ಪಟ್ಟಿದ್ದರು. ಆ ಬಳಿಕ ಪಾಕಿಸ್ತಾನದಲ್ಲಿ ಆಡಲು ಬೇರೆ ತಂಡಗಳು ಹಿಂಜರಿಯುತ್ತಿವೆ.