ಕಳಪೆ ಫಾರ್ಮ್'ನಿಂದ ತಂಡದಿಂದ ಹೊರಬಿದ್ದಿದ್ದ ಚಾಮರಾ ಕಪುಗೆಡರ, ದೇಶಿಯ ಟೂರ್ನಿಯಲ್ಲಿ ಉತ್ತಮ ರನ್ ಕಲೆಹಾಕಿರುವ ಹಿನ್ನೆಲೆಯಲ್ಲಿ ಸುಮಾರು ಒಂದು ವರ್ಷದ ಬಳಿಕ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಕೊಲಂಬೋ(ಏ.24): ಮುಂದಿನ ಜೂನ್ 01ರಿಂದ ಇಂಗ್ಲೆಂಡ್'ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಶ್ರೀಲಂಕಾದ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ.
ಗಾಯಾಳುಗಳಾದ ಕಾರಣ ಈ ಹಿಂದೆ ತಂಡದಿಂದ ಹೊರಬಿದ್ದಿದ್ದ ಲಸಿತ್ ಮಾಲಿಂಗ, ಆ್ಯಂಜೆಲೋ ಮ್ಯಾಥ್ಯೂಸ್ ಅವರು ಮರಳಿ ತಂಡದಲ್ಲಿ ಸ್ಥಾನಪಡೆಯಲು ಯಶಸ್ವಿಯಾಗಿದ್ದಾರೆ. ಇನ್ನು ಆ್ಯಂಜಲೋ ಮ್ಯಾಥ್ಯೂಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಕಳಪೆ ಫಾರ್ಮ್'ನಿಂದ ತಂಡದಿಂದ ಹೊರಬಿದ್ದಿದ್ದ 30 ವರ್ಷದ ಚಾಮರಾ ಕಪುಗೆಡರ, ದೇಶಿಯ ಟೂರ್ನಿಯಲ್ಲಿ ಉತ್ತಮ ರನ್ ಕಲೆಹಾಕಿರುವ ಹಿನ್ನೆಲೆಯಲ್ಲಿ ಸುಮಾರು ಒಂದು ವರ್ಷದ ಬಳಿಕ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಶ್ರೀಲಂಕಾ ತಂಡ ಇಂತಿದೆ:
ಆ್ಯಂಜಲೋ ಮ್ಯಾಥ್ಯೂಸ್(ನಾಯಕ), ಉಪುಲ್ ತರಂಗ(ಉಪನಾಯಕ), ನಿರ್ಶೋನ್ ಡಿಕ್'ವೆಲ್ಲಾ, ಕುಸಾಲ್ ಪೆರೆರಾ, ಕುಸಾಲ್ ಮೆಂಡೀಸ್, ಚಾಮರಾ ಕಪುಗೆಡರ, ಅಸೀಲಾ ಗುಣರತ್ನೆ, ದಿನೇಶ್ ಚಾಂಡಿಮಲ್, ಲಸೀತ್ ಮಾಲಿಂಗ, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ನುವಾನ್ ಕುಲಸೇಖರ, ತಿಸಾರ ಪೆರೆರಾ, ಲಕ್ಸನ್ ಸಂದಕನ್, ಸೀಕ್ಕುಗೆ ಪ್ರಸನ್ನ.
