ಆತಿಥೇಯ ಇಂಗ್ಲೆಂಡ್ ಸೇರಿದಂತೆ ಸೆಪ್ಟೆಂಬರ್ 30ರೊಳಗೆ ರಾಂಕಿಂಗ್ ಪಟ್ಟಿಯಲ್ಲಿ ಅಗ್ರ 8 ಸ್ಥಾನದಲ್ಲಿರುವ ತಂಡಗಳಿಗೆ ನೇರ ಪ್ರವೇಶ ದೊರೆಯಲಿದೆ
ದುಬೈ(ಸೆ.20): ಶ್ರೀಲಂಕಾ, 2019ರ ಐಸಿಸಿ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆದ ೮ನೇ ಹಾಗೂ ಕೊನೆಯ ತಂಡವೆನಿಸಿಕೊಂಡಿದೆ.
ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್'ಇಂಡೀಸ್ 7 ವಿಕೆಟ್‌ಗಳ ಸೋಲು ಅನುಭವಿಸಿದ ಬಳಿಕ, ಲಂಕಾ ನೇರ ಪ್ರವೇಶ ಖಚಿತವಾಯಿತು. ಆತಿಥೇಯ ಇಂಗ್ಲೆಂಡ್ ಸೇರಿದಂತೆ ಸೆಪ್ಟೆಂಬರ್ 30ರೊಳಗೆ ರಾಂಕಿಂಗ್ ಪಟ್ಟಿಯಲ್ಲಿ ಅಗ್ರ 8 ಸ್ಥಾನದಲ್ಲಿರುವ ತಂಡಗಳಿಗೆ ನೇರ ಪ್ರವೇಶ ದೊರೆಯಲಿದೆ. ಹೀಗಾಗಿ,ರಾಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನಕ್ಕಾಗಿ ಶ್ರೀಲಂಕಾ ಹಾಗೂ ವಿಂಡೀಸ್ ವಿರುದ್ಧ ನೇರ ಪೈಪೋಟಿ ಇತ್ತು. ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ಶ್ರೀಲಂಕಾ ಕನಿಷ್ಠ 2 ಪಂದ್ಯಗಳನ್ನು ಗೆಲ್ಲಬೇಕಿತ್ತು. ಆದರೆ ೦-5ರಲ್ಲಿ ಸೋತ ಬಳಿಕ, ವಿಂಡೀಸ್ ಸೋಲಿಗೆ ಲಂಕಾ ಪ್ರಾರ್ಥಿಸುತ್ತಿತ್ತು. ಇಂಗ್ಲೆಂಡ್ ವಿರುದ್ಧ 5-೦ ಅಂತರದಲ್ಲಿ ಸರಣಿ ಗೆದ್ದಿದ್ದರೆ, ವಿಂಡೀಸ್‌ಗೆ ನೇರ ಪ್ರವೇಶ ದೊರೆಯುತಿತ್ತು.
