ಭಾರತ ವಿರುದ್ಧ 2 ಪಂದ್ಯಗಳನ್ನು ಗೆದ್ದರೆ ಶ್ರೀಲಂಕಾದ ಅಂಕ ಒಟ್ಟು 90ಕ್ಕೇರಲಿದೆ. ಐರ್ಲೆಂಡ್ ವಿರುದ್ಧ ಒಂದು ಹಾಗೂ ಇಂಗ್ಲೆಂಡ್ ವಿರುದ್ಧದ ಎಲ್ಲಾ 5 ಏಕದಿನ ಪಂದ್ಯಗಳನ್ನು ಗೆದ್ದರೂ ವೆಸ್ಟ್'ಇಂಡೀಸ್ ಗಳಿಸಲು ಸಾಧ್ಯವಿರುವುದು ಕೇವಲ 88 ಅಂಕಗಳನ್ನು ಮಾತ್ರ.

ಕೊಲಂಬೊ(ಆ.19): ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ವೈಟ್'ವಾಶ್ ಮುಖಭಂಗ ಅನುಭವಿಸಿದ ಶ್ರೀಲಂಕಾ, ಇದೀಗ ಏಕದಿನ ಸರಣಿಗೂ ಭಾರೀ ಒತ್ತಡದೊಂದಿಗೇ ಕಣಕ್ಕಿಳಿಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2019ರ ಐಸಿಸಿ ಏಕದಿನ ವಿಶ್ವಕಪ್‌'ಗೆ ನೇರ ಅರ್ಹತೆ ಪಡೆಯಬೇಕಿದ್ದರೆ, ಮಾಜಿ ವಿಶ್ವ ಚಾಂಪಿಯನ್ ಶ್ರೀಲಂಕಾ ತಂಡವು ಟೀಂ ಇಂಡಿಯಾ ಎದುರಿನ 5 ಪಂದ್ಯಗಳಸರಣಿಯಲ್ಲಿ ಕನಿಷ್ಠ ಎರಡರಲ್ಲಾದರೂ ಜಯ ಸಾಧಿಸಬೇಕಿದೆ. ನೇರ ಅರ್ಹತೆ ಪಡೆಯಲು ಸೆ.30 ಕೊನೆ ದಿನಾಂಕವಾಗಿದ್ದು, ಶ್ರೀಲಂಕಾ 88 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಇನ್ನು ವೆಸ್ಟ್ ಇಂಡೀಸ್‌'ಗಿಂತ ಲಂಕಾ 10 ಅಂಕಗಳಿಂದ ಮುಂದಿದೆ. ಆತಿಥೇಯ ರಾಷ್ಟ್ರ ಇಂಗ್ಲೆಂಡ್ ಜತೆ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 7 ಸ್ಥಾನ ಹೊಂದಿರುವ ತಂಡಗಳು ವಿಶ್ವಕಪ್'ಗೆ ನೇರ ಪ್ರವೇಶ ಪಡೆಯಲಿವೆ.

ಹಾಗೆಯೇ ಶ್ರೇಯಾಂಕ ಪಟ್ಟಿಯಲ್ಲಿ ಕೊನೆ 4 ಸ್ಥಾನ ಪಡೆದಿರುವ ತಂಡಗಳು, ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಚಾಂಪಿಯನ್‌'ಶಿಪ್‌'ನ 4 ತಂಡಗಳು ಹಾಗೂ ಐಸಿಸಿ ವಿಶ್ವ ಕ್ರಿಕೆಟ್ ಲೀಗ್‌'ನ 2 ತಂಡಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಲಿವೆ. ಇಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು 2019ರ ವಿಶ್ವಕಪ್‌'ಗೆ ಅರ್ಹತೆ ಪಡೆಯಲಿವೆ.

ಶ್ರೀಲಂಕಾ ವಿಶ್ವ ಕಪ್ ನೇರ ಪ್ರವೇಶ ಪಡೆಯಲು ಏನು ಮಾಡಬೇಕು..?

ಭಾರತ ವಿರುದ್ಧ 2 ಪಂದ್ಯಗಳನ್ನು ಗೆದ್ದರೆ ಶ್ರೀಲಂಕಾದ ಅಂಕ ಒಟ್ಟು 90ಕ್ಕೇರಲಿದೆ. ಐರ್ಲೆಂಡ್ ವಿರುದ್ಧ ಒಂದು ಹಾಗೂ ಇಂಗ್ಲೆಂಡ್ ವಿರುದ್ಧದ ಎಲ್ಲಾ 5 ಏಕದಿನ ಪಂದ್ಯಗಳನ್ನು ಗೆದ್ದರೂ ವೆಸ್ಟ್'ಇಂಡೀಸ್ ಗಳಿಸಲು ಸಾಧ್ಯವಿರುವುದು ಕೇವಲ 88 ಅಂಕಗಳನ್ನು ಮಾತ್ರ. ಒಂದೊಮ್ಮೆ ಭಾರತ ವಿರುದ್ಧ 1-4ರಿಂದ ಸರಣಿ ಸೋತರೆ,ಲಂಕಾದ ಅಂಕ 88 ಆಗಲಿದೆ. ವೆಸ್ಟ್‌ಇಂಡೀಸ್ ತಾನಾಡುವ ಎಲ್ಲಾ 6 ಪಂದ್ಯಗಳಲ್ಲೂ ಗೆದ್ದರೆ, ಲಂಕಾ ಹಿಂದಿಕ್ಕಿ ತಾನು ನೇರ ಪ್ರವೇಶ ಪಡೆಯುವ ಅವಕಾಶ ಗಿಟ್ಟಿಸಲಿದೆ. ಐರ್ಲೆಂಡ್ ವಿರುದ್ಧ ವಿಂಡೀಸ್ ಸೋಲುಂಡರೆ, ನೇರ ಅರ್ಹತೆ ಪಡೆಯುವ ಅವಕಾಶವನ್ನು ಕೈಚೆಲ್ಲಲಿದ್ದು, ಭಾರತ ವಿರುದ್ಧ 0-5ರಲ್ಲಿ ಸರಣಿ ಸೋತರೂ ಶ್ರೀಲಂಕಾ ತಂಡವೇ ವಿಶ್ವಕಪ್‌ಗೆ ಪ್ರವೇಶ ಪಡೆಯಲಿದೆ.