5 ವರ್ಷಗಳ ನಿಷೇಧವು 2 ಹಂತದಲ್ಲಿ ಇರಲಿದ್ದು, ಮೊದಲ ಶಿಕ್ಷೆ ಅವಧಿ ಎರಡೂವರೆ ವರ್ಷಗಳ ಕಾಲ ಇರಲಿದೆ. ಈ ವೇಳೆ ಪಿಸಿಬಿ ಶಾರ್ಜೀಲ್ ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸಲಿದ್ದು, ಮುಂದಿನ ಶಿಕ್ಷೆ ಕುರಿತು ಬಳಿಕ ತೀರ್ಮಾನ ಕೈಗೊಳ್ಳಲಿದೆ ಎಂದು ನ್ಯಾಯಾಲಯ ತಿಳಿಸಿದೆ.

ಕರಾಚಿ(ಆ.31): ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಸ್ಪಾಟ್‌ಫಿಕ್ಸಿಂಗ್ ನಡೆಸಿದ ಪ್ರಕ್ರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ, ಪಾಕ್ ತಂಡದ ಟೆಸ್ಟ್ ಬ್ಯಾಟ್ಸ್‌ಮನ್ ಶಾರ್ಜೀಲ್ ಖಾನ್‌ರನ್ನು 5 ವರ್ಷಗಳ ಕಾಲ ನಿಷೇಧಿಸಿದೆ.

5 ವರ್ಷಗಳ ನಿಷೇಧವು 2 ಹಂತದಲ್ಲಿ ಇರಲಿದ್ದು, ಮೊದಲ ಶಿಕ್ಷೆ ಅವಧಿ ಎರಡೂವರೆ ವರ್ಷಗಳ ಕಾಲ ಇರಲಿದೆ. ಈ ವೇಳೆ ಪಿಸಿಬಿ ಶಾರ್ಜೀಲ್ ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸಲಿದ್ದು, ಮುಂದಿನ ಶಿಕ್ಷೆ ಕುರಿತು ಬಳಿಕ ತೀರ್ಮಾನ ಕೈಗೊಳ್ಳಲಿದೆ ಎಂದು ನ್ಯಾಯಾಲಯ ತಿಳಿಸಿದೆ. ಶಿಕ್ಷೆಯ ಅವಧಿ ಈ ವರ್ಷದ ಫೆಬ್ರವರಿ 10ರಿಂದ ಅನ್ವಯಗೊಳ್ಳಲಿದೆ ಎಂದಿದೆ.