ಪ್ರಸ್ತುತ ವೆಸ್ಟ್'ಇಂಡೀಸ್ ತಂಡವು 9 ಶ್ರೇಯಾಂಕದಲ್ಲಿದ್ದು ಚಾಂಪಿಯನ್ಸ್ ಟ್ರೋಫಿಯಿಂದ ಕೂಡಾ ಹೊರಬಿದ್ದಿದೆ.

ಬೆಂಗಳೂರು(ಮೇ.01): ಐಸಿಸಿಯು ಏಕದಿನ ತಂಡಗಳ ನೂತನ ಶ್ರೇಯಾಂಕಪಟ್ಟಿಯನ್ನು ಪ್ರಕಟಿಸಿದ್ದು ದಕ್ಷಿಣ ಆಫ್ರಿಕಾ ತಂಡ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ದಕ್ಷಿಣ ಆಫ್ರಿಕಾಗಿಂತ 5 ಅಂಕ ಹಿಂದಿರುವ ಆಸ್ಟ್ರೇಲಿಯಾ ತಂಡವು ಎರಡನೇ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್ ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಇಂಗ್ಲೆಂಡ್ ತಂಡವೊಂದನ್ನು ಹೊರತುಪಡಿಸಿ ಉಳಿದ ಗರಿಷ್ಟ ಶ್ರೇಯಾಂಕ ಹೊಂದಿದ ಏಳು ತಂಡಗಳು ಇಂಗ್ಲೆಂಡ್ ಹಾಗೂ ವೇಲ್ಸ್'ನಲ್ಲಿ 2019ರಲ್ಲಿ ನಡೆಯಲಿರುವ ವಿಶ್ವಕಪ್'ಗೆ ನೇರವಾಗಿ ಅರ್ಹತೆ ಪಡೆಯಲಿವೆ.

ಪ್ರಸ್ತುತ ವೆಸ್ಟ್'ಇಂಡೀಸ್ ತಂಡವು 9 ಶ್ರೇಯಾಂಕದಲ್ಲಿದ್ದು ಚಾಂಪಿಯನ್ಸ್ ಟ್ರೋಫಿಯಿಂದ ಕೂಡಾ ಹೊರಬಿದ್ದಿದೆ. ಐಸಿಸಿ ನಿಯಮದಂತೆ ಸೆಪ್ಟೆಂಬರ್ 30, 2017ರ ವೇಳೆಗೆ ಶ್ರೇಯಾಂಕದಲ್ಲಿ ಟಾಪ್ 8 ತಂಡಗಳು ವಿಶ್ವಕಪ್'ಗೆ ಪಾಲ್ಗೊಳ್ಳಲು ನೇರ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಹಾಗಾಗಿ ಐಸಿಸಿ ಏಕದಿನ ವಿಶ್ವಕಪ್'ಗೆ ವೆಸ್ಟ್'ಇಂಡೀಸ್ ನೇರಪ್ರವೇಶ ಪಡೆಯುವ ಸಾಧ್ಯತೆ ಕ್ಷೀಣಿಸಿದೆ.

ನೂತನ ಶ್ರೇಯಾಂಕ ಪಟ್ಟಿ ಹೀಗಿದೆ:

1.        ದಕ್ಷಿಣ ಆಫ್ರಿಕಾ     123

2.       ಆಸ್ಟ್ರೇಲಿಯಾ      118

3.       ಭಾರತ            117

4.       ನ್ಯೂಜಿಲ್ಯಾಂಡ್    115

5.       ಇಂಗ್ಲೆಂಡ್         109

6.       ಶ್ರೀಲಂಕಾ         93

7.        ಬಾಂಗ್ಲಾದೇಶ     91

8.       ಪಾಕಿಸ್ತಾನ        88

9.       ವೆಸ್ಟ್'ಇಂಡೀಸ್    79

10.      ಆಫ್ಘಾನಿಸ್ತಾನ     52