Asianet Suvarna News Asianet Suvarna News

ದೇಶವಿಡೀ ಫೈನಲ್ ಫೈಟ್'ನಲ್ಲಿ ಬ್ಯುಸಿಯಗಿದ್ದಾಗ ಸೌತ್ ಆಫ್ರಿಕಾದಲ್ಲಿ ದಾಖಲಾಯ್ತು ವಿಶ್ವ ದಾಖಲೆ

ಭಾನುವಾರ ಇಡೀ ಭಾರತವೇ  ಟೀಂ ಇಂಡಿಯಾ ಮತ್ತು ಕಿವೀಸ್​​​​​ ನಡುವಿನ ಫೈನಲ್​ ಫೈಟ್​​ನಲ್ಲಿ ಮುಳುಗಿ ಹೋಗಿತ್ತು. ಆದ್ರೆ ಇದೇ ಟೈಮ್​ನಲ್ಲಿ ಸೌತ್​​​ ಆಫ್ರಿಕಾದಲ್ಲಿ ಒಂದು ವರ್ಲ್ಡ್ ರೆಕಾರ್ಡ್​ ಕ್ರಿಯೇಟ್​​ ಆಗಿತ್ತು. ವಿಶ್ವವೇ ದಂಗು ಬೀಳುವಂತ ಒಂದು ದಾಖಲೆ ನಿರ್ಮಾಣವಾಗಿತ್ತು. ಆದ್ರೆ ಇದುವರೆಗೂ ನಮ್ಮ ದೇಶದ ಜನಸಿಗೆ ಅದರ ಅರಿವೇ ಇಲ್ಲ. ಅಷ್ಟಕ್ಕೂ ಯಾವುದು ಆ ಹೊಸ ದಾಖಲೆ ಅಂತೀರಾ..? ಇಲ್ಲಿದೆ ನೋಡಿ ವಿವರ

south africa created a world record

ಭಾನುವಾರ ರಾತ್ರಿ 9 ಗಂಟೆ ಹೊತ್ತಿಗೆ ಇಡೀ ಭಾರತವೇ ಟೀಂ ಇಂಡಿಯಾ ಗೆಲ್ಲುತ್ತೋ ಇಲ್ಲವೋ ಅನ್ನೋ ಆತಂಕದಲ್ಲಿ ಮುಳುಗಿ ಹೋಗಿತ್ತು. ಟೆಕ್ಷನ್​ನಲ್ಲಿ ಎಲ್ಲಾ ಕ್ರಿಕೆಟ್​​ ಪ್ರೇಮಿಗಳು ಒದ್ದಾಡುತ್ತಿದ್ರು. ಆದ್ರೆ ಇದೇ ಟೈಮ್​ನಲ್ಲಿ ದೂರದ ದಕ್ಷಿಣ ಆಫ್ರಿಕಾದಲ್ಲಿ ಒಂದು ವಿಶ್ವ ದಾಖಲೆ ನಿರ್ಮಾಣವಾಗಿತ್ತು. ಬಾಂಗ್ಲಾ ವಿರುದ್ಧದ ಟಿ20 ಪಂದ್ಯದಲ್ಲಿ ಸೌತ್​​​ ಆಫ್ರಿಕಾದ ಡ್ಯಾಷಿಂಗ್​ ಬ್ಯಾಟ್ಸ್​ಮನ್​ ಒಬ್ಬ ಇಡೀ ವಿಶ್ವವನ್ನೇ ದಂಗು ಬಡಿಸಿದ್ದ

ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗದ ಶತಕ ದಾಖಲಿಸಿದ ಮಿಲ್ಲರ್​​

ಇತ್ತ ಭಾರತದಲ್ಲಿ ನ್ಯೂಜಿಲೆಂಡ್​​​ ವಿರುದ್ಧ ಟೀಂ ಇಂಡಿಯಾ ಸೆಣಸಾಟ ನಡೆಸುತ್ತಿದ್ರೆ ಸೌತ್​ ಆಫ್ರಿಕಾದಲ್ಲಿ ಬಾಂಗ್ಲಾ ವಿರುದ್ಧ ಹರಿಣಗಳು ಟಿ20 ಪಂದ್ಯದಲ್ಲಿ ಕಾದಾಡುತ್ತಿದ್ರು. ಅದೇ ಪಂದ್ಯದಲ್ಲಿ ಕಿಲ್ಲರ್​​​ ಮಿಲ್ಲರ್​​​ ಅಬ್ಬರಿಸಿ ಬೊಬ್ಬರಿದಿದ್ದರು. ಬಾಂಗ್ಲಾ ಬೌಲರ್'ಗಳನ್ನ ಬೆಂಡೆತ್ತಿದ ಮಿಲ್ಲರ್​​​ ಬೌಂಡರಿ ಸಿಕ್ಸ್​​ಗಳನ್ನ ಸಿಡಿಸಿದ್ರು. ಕ್ರೀಸ್'​​ಗೆ ಬಂದಾಗಿನಿಂದ ಆಕ್ರಮಣಕಾರಿ ಆಟವಾಡಿದ ಮಿಲ್ಲರ್​​​ ಕೇವಲ 35 ಬಾಲ್​ಗಳಲ್ಲೇ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ರು.

ಕೇವಲ 35 ಬಾಲ್​ಗಳಲ್ಲೇ ಶತಕ ಸಿಡಿಸುವುದರೊಂದಿಗೆ ಮಿಲ್ಲರ್​​ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ದಾಖಲೆ ಮಾಡಿದ್ರು. ತಮ್ಮದೇ ದೇಶದ ರಿಚರ್ಡ್​ ಲಿವಿ 2012 ರಲ್ಲಿ 45 ಬಾಲ್​ಗಳಲ್ಲಿ ಸಿಡಿಸಿದ್ದ ದಾಖಲೆಯನ್ನ ಮಿಲ್ಲರ್​​ ಪುಡಿಪುಡಿ ಮಾಡಿದ್ರು.

ತಮ್ಮ ಹಳ್ಳವನ್ನ ತಾವೇ ತೋಡಿಕೊಂಡ ಬಾಂಗ್ಲನ್ನರು

ನಿಜ ಹೇಳಬೇಕಂದ್ರೆ ಮೊನ್ನೆ ಮಿಲ್ಲರ್​​ ದಾಖಲೆಯ ಶತಕ ಸಿಡಿಸಲು ಸಾಧ್ಯವೇ ಆಗ್ತಿರಲಿಲ್ಲ. ಅವರ ಶತಕಕ್ಕೆ ಮುಖ್ಯ ಕಾರಣನೇ ಬಂಗ್ಲಾ ವಿಕೆಟ್​​ ಕೀಪರ್​​​ ಮುಷ್​​ಫಿಕುರ್​​​ ರಹೀಮ್​ ಮಾಡಿದ್ದ 1 ಎಡವಟ್ಟು. ಅದಕ್ಕೆ ಮಿಲ್ಲರ್​​ ಆ ರೆಕಾರ್ಡ್​ ಅನ್ನ ರಹೀಮ್​ಗೆ ಸಮರ್ಪಿಸಬೇಕು. ಕಾರಣ ಡೆವಿಡ್​​ ಮಿಲ್ಲರ್​​​ ಖಾತೆ ತೆರೆಯುವ ಮುಂಚೆನೇ ಔಟಾಗಬೇಕಿತ್ತು. ಕ್ರೀಸ್​​​ಗಿಳಿದು ಎದುರಿಸಿದ್ದ ಮೊದಲ ಎಸೆತದಲ್ಲೇ ವಿಕೆಟ್​​​ ಒಪ್ಪಿಸಿ ಪಿವಿಲಿಯನ್​ ಸೇರಿಕೊಳ್ಳಬೇಕಿತ್ತು. ಆದ್ರೆ ಬಾಂಗ್ಲಾ ವಿಕೆಟ್​ ಕೀಪರ್​​  ಮುಷ್​​ಫಿಕುರ್​​​ ರಹೀಮ್​, ಮಿಲ್ಲರ್​​ ನೀಡಿದ್ದ ಕ್ಯಾಚನ್ನ ಡ್ರಾಪ್​ ಮಾಡಿ ಜೀವದಾನ ನೀಡಿದ್ರು.

ನೀಡಿದ ಜೀವದಾನವನ್ನ ಸಮರ್ಪಕವಾಗಿ ಬಳಸಿಕೊಂಡ ಮಿಲ್ಲರ್​​​ ಬಾಂಗ್ಲಾರನ್ನ ಇನ್ನಿಲ್ಲದಂತೆ ಕಾಡಿದ್ರು. ಬೌಲರ್​ಗಳನ್ನ ಬೆಂಡೆತ್ತಿದ್ರು. ದಾಖಲೆಯ ಶತಕ ಸಿಡಸಿ ಒಂದು ಚಾನ್ಸ್​​​ ನೀಡಿದ್ರೆ ಏನೆಲ್ಲಾ ಆಗುತ್ತೆ ಅಂತ ತೋರಿಸಿಕೊಟ್ರು.

ಒಟ್ಟಿನಲ್ಲಿ ಮೊನ್ನೆಯ ಮಿಲ್ಲರ್​​​ ಇನ್ನಿಂಗ್ಸ್​​ ನೋಡುಗರಿಗೆ ಕಿಕ್​ ಹೆಚ್ಚಿಸಿತ್ತು. ಸೌತ್​​ ಆಫ್ರಿಕಾದ ಕ್ರಿಕೆಟ್​​ ಪ್ರೇಮಿಗಳಿಗೆ ಮನರಂಜನೆಯ ರಸ ದೌತಣ ಸಿಕ್ಕಿತ್ತು. ಆದ್ರೆ ಕ್ಯಾಚ್​​ ಡ್ರಾಪ್​ ಮಾಡಿ  ಬಾಂಗ್ಲಾ ಸ್ಥಿತಿ ಇಂಗು ತಿಂದ ಮಂಗನಂತಾಗಿತ್ತು.

Latest Videos
Follow Us:
Download App:
  • android
  • ios