ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ವೇಗದ ತ್ರಿಶತಕ ಬಾರಿಸಿದ ದಾಖಲೆ ಇದಾಗಿದೆ

ಜೋಹಾನ್ಸ್‌ಬರ್ಗ್(ನ.26): ದಕ್ಷಿಣ ಆಫ್ರಿಕಾದ ದಾಂಡಿಗನೊಬ್ಬ ಹೊಸ ದಾಖಲೆ ನಿರ್ಮಿಸಿ ಕೇವಲ 191 ಎಸೆತಗಳಲ್ಲಿ 300 ರನ್ ಪೂರೈಸಿ 96 ವರ್ಷಗಳ ದಾಖಲೆ ಮುರಿದಿದ್ದಾನೆ. ದಕ್ಷಿಣ ಆಫ್ರಿಕಾದ ಮಾರ್ಕೊ ಮರಾಯಸ್ ಇತಿಹಾಸ ನಿರ್ಮಿಸಿದ ಆಟಗಾರ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ವೇಗದ ತ್ರಿಶತಕ ಬಾರಿಸಿದ ದಾಖಲೆ ಇದಾಗಿದೆ. ಆಫ್ರಿಕಾದ ದೇಸಿ ಪ್ರಥಮ ದರ್ಜೆ ಪಂದ್ಯಾವಳಿಯಲ್ಲಿ ಬಾರ್ಡರ್ ತಂಡದ ಬ್ಯಾಟ್ಸ್'ಮೆನ್ ಮಾರ್ಕೊ, ಪೂರ್ವ ವಲಯದ ವಿರುದ್ಧ ಕೇವಲ 191 ಎಸೆತಗಳಲ್ಲಿ 300 ರನ್ ಪೂರೈಸಿ 96 ವರ್ಷಗಳ ದಾಖಲೆ ಮುರಿದರು.ಮಾರ್ಕೋ ಇನ್ನಿಂಗ್ಸ್'ನಲ್ಲಿ 35 ಬೌಂಡರಿ ಹಾಗೂ 13 ಸಿಕ್ಸರ್‌ಗಳಿದ್ದವು.

Add Asianetnews Kannada as a Preferred SourcegooglePreferred