ಆಫ್ರಿಕಾ 194ಕ್ಕೆ ಆಲೌಟ್; ಮಿಂಚಿದ ಬುಮ್ರಾ

First Published 25, Jan 2018, 8:29 PM IST
South Africa 194 all out
Highlights

ಮೊದಲ ದಿನವೇ ಒಂದು ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾಗೆ ಭುವನೇಶ್ವರ್ ಕುಮಾರ್ ಎರಡನೇ ದಿನದಾಟದ ಆರಂಭದಲ್ಲೂ ಎಲ್ಗರ್ ವಿಕೆಟ್ ಕಿತ್ತು ಶಾಕ್ ನೀಡಿದರು.

ಜೊಹಾನ್ಸ್'ಬರ್ಗ್(ಜ.25): ಜಸ್'ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್'ನಲ್ಲಿ 194 ರನ್'ಗಳಿಗೆ ಸರ್ವಪತನ ಕಂಡಿದೆ. ಬುಮ್ರಾ 5 ವಿಕೆಟ್ ಕಬಳಿಸಿದರೆ ಭುವಿ 3 ವಿಕೆಟ್ ಪಡೆದು ಆಫ್ರಿಕಾಗೆ ಆಘಾತ ನೀಡಿದರು.

ಮೊದಲ ದಿನವೇ ಒಂದು ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾಗೆ ಭುವನೇಶ್ವರ್ ಕುಮಾರ್ ಎರಡನೇ ದಿನದಾಟದ ಆರಂಭದಲ್ಲೂ ಎಲ್ಗರ್ ವಿಕೆಟ್ ಕಿತ್ತು ಶಾಕ್ ನೀಡಿದರು. ಆದರೆ ಮೂರನೇ ವಿಕೆಟ್'ಗೆ ರಬಾಡ ಹಾಗೂ ಆಮ್ಲಾ 64 ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ರಬಾಡ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ ಆಫ್ರಿಕಾ, ಕೆಲಹೊತ್ತಿನಲ್ಲೇ ಎಬಿ ಡಿವಿಲಿಯರ್ಸ್ ಹಾಗೂ ಡು ಪ್ಲೆಸಿಸ್ ವಿಕೆಟ್ ಕಳೆದುಕೊಂಡಿತು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ಆಡಿದ ಹಾಶೀಂ ಆಮ್ಲಾ ಅರ್ಧಶತಕ(61) ಸಿಡಿಸಿ ಸಂಭ್ರಮಿಸಿದರು. ಇವರಿಗೆ ಕೆಳ ಕ್ರಮಾಂಕದಲ್ಲಿ ಫಿಲಾಂಡರ್(35) ಉತ್ತಮ ಸಾಥ್ ನೀಡಿದರು. ಅರ್ಧಶತಕ ಬಾರಿಸಿದ ನಂತರ ತಾಳ್ಮೆ ಕಳೆದುಕೊಂಡ ಆಮ್ಲಾ ವೇಗಿ ಬುಮ್ರಾಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಕೆಳಕ್ರಮಾಂಕದ ಬಾಲಂಗೋಚಿಗಳನ್ನು ಪೆವಿಲಿಯನ್'ಗೆ ಅಟ್ಟಿದ ಬುಮ್ರಾ ಆಫ್ರಿಕಾ ಮೊದಲ ಇನಿಂಗ್ಸ್'ಗೆ ತೆರೆ ಎಳೆದರು.

ಸಂಕ್ಷಿಪ್ತ ಸ್ಕೋರ್:

ಭಾರತ: 187/10

ವಿರಾಟ್ ಕೊಹ್ಲಿ: 54

ರಬಾಡ: 39/3

ದಕ್ಷಿಣ ಆಫ್ರಿಕಾ: 194/10

ಹಾಶೀಂ ಆಮ್ಲಾ: 61

ಜಸ್'ಪ್ರೀತ್ ಬುಮ್ರಾ: 54/5

(* ವಿವರ ಅಪೂರ್ಣ)    

loader