ಭಾರತ- ನ್ಯೂಜಿಲೆಂಡ್ ನಡುವಣದ ಕ್ರಿಕೆಟ್ ಸರಣಿಯ ವೀಕ್ಷಕ ವಿವರಣೆಗಾರರೂ ಆಗಿರುವ ವೀರೂಗೆ ಸರಣಿಯ ದ್ವಿತೀಯ ಏಕದಿನ ಪಂದ್ಯದ ವೇಳೆ ಗಂಗೂಲಿ ಶುಭಾಶಯ ಸಲ್ಲಿಸಿದರು.

ನವದೆಹಲಿ(ಅ.20): ದಶಕದ ಹಿಂದೆ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಜನರನ್ನು ರಂಜಿಸಿದ್ದ ಟೀಂ ಇಂಡಿಯಾದ ಆರಂಭಿಕ ವೀರೇಂದ್ರ ಸೆಹ್ವಾಗ್ ಇಂದು ತಮ್ಮ 38ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಚಲಿತ ಘಟನೆಗಳಿಗೆ ವಿಡಂಬನಾತ್ಮಕವಾಗಿಯೇ ಟ್ವೀಟ್ ಮಾಡುತ್ತಾ ಟ್ವೀಟರ್‌ನಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಸೆಹ್ವಾಗ್‌ಗೆ ಅವರ ಹುಟ್ಟುಹಬ್ಬದಂದು ಶುಭಾಷಯಗಳ ಮಹಾಪೂರವೇ ಹರಿದುಬಂತು.

ಸದ್ಯಕ್ಕೆ, ಭಾರತ- ನ್ಯೂಜಿಲೆಂಡ್ ನಡುವಣದ ಕ್ರಿಕೆಟ್ ಸರಣಿಯ ವೀಕ್ಷಕ ವಿವರಣೆಗಾರರೂ ಆಗಿರುವ ವೀರೂಗೆ ಸರಣಿಯ ದ್ವಿತೀಯ ಏಕದಿನ ಪಂದ್ಯದ ವೇಳೆ ಗಂಗೂಲಿ ಶುಭಾಶಯ ಸಲ್ಲಿಸಿದರು.

ದಾದಾ ಮಾತ್ರವಲ್ಲದೇ ಕ್ರಿಕೆಟ್ ದಿಗ್ಗಜರೂ ಕೂಡ ಸೆಹ್ವಾಗ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ತಮ್ಮ ಜನ್ಮದಿನಕ್ಕೆ ಶುಭಕೋರಿದ ಎಲ್ಲರಿಗೂ ವೀರೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.