Asianet Suvarna News Asianet Suvarna News

ಮರಡೋನಾ ಜತೆ ಫುಟ್ಬಾಲ್ ಆಡಲಿರುವ ದಾದಾ, ಧನರಾಜ್ ಪಿಳ್ಳೈ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸಹ ಈ ಪಂದ್ಯದಲ್ಲಿ ಆಡಲಿದ್ದು, ಪ್ರಖ್ಯಾತ ಮೋಹನ್ ಬಗಾನ್ ಫುಟ್ಬಾಲ್ ಕ್ಲಬ್‌'ನ ಅನೇಕ ಪ್ರಮುಖ ಆಟಗಾರರು ತಮ್ಮ ಕಾಲ್ಚಳಕ ತೋರಲಿದ್ದಾರೆ.

Sourav Ganguly To Play Charity Match With Diego Maradona

ಕೋಲ್ಕತಾ(ಆ.17): ಇದೇ ಅಕ್ಟೋಬರ್‌'ನಿಂದ ಆರಂಭವಾಗಲಿರುವ 17 ವರ್ಷದೊಳಗಿನ ಫುಟ್ಬಾಲ್ ವಿಶ್ವಕಪ್‌'ಗೆ ಪ್ರಚಾರ ನೀಡುವ ಸಲುವಾಗಿ ಅರ್ಜೆಂಟೀನಾದ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಭಾರತಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಕೋಲ್ಕತಾದಲ್ಲಿ ಸೌಹಾರ್ದತಯುತ ಫುಟ್ಬಾಲ್ ಪಂದ್ಯವೊಂದನ್ನು ಏರ್ಪಡಿಸಲಾಗಿದೆ.

ಈ ಪಂದ್ಯದಲ್ಲಿ ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೈ, ಖ್ಯಾತ ಬಂಗಾಳಿ ಚಿತ್ರ ನಟ ಅಬಿರ್ ಚಟರ್ಜಿ, ಕ್ರಿಕೆಟಿಗರಾದ ಮನೋಜ್ ತಿವಾರಿ, ದೀಪ್‌'ದಾಸ್‌'ಗುಪ್ತಾ ಆಡುವುದು ಖಚಿತ ಪಡಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸಹ ಈ ಪಂದ್ಯದಲ್ಲಿ ಆಡಲಿದ್ದು, ಪ್ರಖ್ಯಾತ ಮೋಹನ್ ಬಗಾನ್ ಫುಟ್ಬಾಲ್ ಕ್ಲಬ್‌'ನ ಅನೇಕ ಪ್ರಮುಖ ಆಟಗಾರರು ತಮ್ಮ ಕಾಲ್ಚಳಕ ತೋರಲಿದ್ದಾರೆ. ಅ.2ರಿಂದ 4ರೊಳಗೆ ಮರಡೋನಾ ಕೋಲ್ಕತಾಗೆ ಆಗಮಿಸುವ ನಿರೀಕ್ಷೆಯಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಅ.6ಕ್ಕೆ ಮೊದಲ ಪಂದ್ಯ:

17 ವರ್ಷದೊಳಗಿನ ಫುಟ್ಬಾಲ್ ವಿಶ್ವಕಪ್‌'ಗೆ ಅ.6ರಂದು ಚಾಲನೆ ದೊರೆಯಲಿದ್ದು, ಮೊದಲೆರಡು ಉದ್ಘಾಟನಾ ಪಂದ್ಯಗಳು ದೆಹಲಿ ಹಾಗೂ ಮುಂಬೈನಲ್ಲಿ ನಡೆಯಲಿವೆ.

Follow Us:
Download App:
  • android
  • ios