ಮುಂದಿನ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿನ ಪಂದ್ಯಗಳಲ್ಲಾದರೂ ಕಾಂಪ್ಲಿಮೆಂಟರಿ ಪಾಸ್‌ಗಳ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಬಿಸ್ಪಾರಪ್ ಹೇಳಿದ್ದಾರೆ.
ಕೋಲ್ಕತಾ(ಫೆ.08): ಭಾರತ ಮತ್ತು ಇಂಗ್ಲೆಂಡ್ ನಡುವಣ ನಡೆದ ಏಕದಿನ ಕ್ರಿಕೆಟ್ ಪಂದ್ಯಕ್ಕಾಗಿ, ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಅಧ್ಯಕ್ಷ ಸೌರವ್ ಗಂಗೂಲಿ 200 ರಿಂದ 300 ಕಾಂಪ್ಲಿಮೆಂಟರಿ ಪಾಸ್'ಗಳನ್ನು ಪಡೆದಿದ್ದರು. ಅಲ್ಲದೇ ಈ ರೀತಿಯ ಕ್ರಮದಿಂದಾಗಿ ಸಾಕಷ್ಟು ಮಾಜಿ ಆಟಗಾರರಿಗೆ ಅನ್ಯಾಯವಾಗಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಮಾಜಿ ಖಜಾಂಚಿ ಬಿಸ್ವಾರಪ್ ಡೇ ಆರೋಪಿಸಿದ್ದಾರೆ.
ಬಿಸ್ವಾರಪ್ ಅವರ ಆರೋಪ ಆಧಾರರಹಿತವಾಗಿದ್ದು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭಾರತದ ಮಾಜಿ ನಾಯಕ ಗಂಗೂಲಿ ಹೇಳಿದ್ದಾರೆ.
ಮುಂದಿನ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿನ ಪಂದ್ಯಗಳಲ್ಲಾದರೂ ಕಾಂಪ್ಲಿಮೆಂಟರಿ ಪಾಸ್ಗಳ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಬಿಸ್ಪಾರಪ್ ಹೇಳಿದ್ದಾರೆ.
