ವಿಜಯ್ ಮಲ್ಯ ಜೊತೆ ಫೋಟೋ ತೆಗೆಸಿಕೊಂಡ್ರಾ ವಿರಾಟ್ ಕೊಹ್ಲಿ?
ಸಾಮಾಜಿಕ ಜಾಲತಾಣದಲ್ಲಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಟೀಕೆಗಳು ವ್ಯಕ್ತವಾಗಿದೆ. ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಜೊತೆ ಕೊಹ್ಲಿ ಫೋಟೋ ತೆಗೆಸಿಕೊಂಡಿದ್ದಾರೆ ಅನ್ನೋ ಟೀಕೆ ವ್ಯಕ್ತವಾಗಿದೆ. ಅಷ್ಟಕ್ಕೂ ಕೊಹ್ಲಿ-ಮಲ್ಯ ಭೇಟಿಯಾದ್ರಾ? ಇಲ್ಲಿದೆ ವಿವರ.
ಚೆಲ್ಮ್ಸ್‌ಫೋರ್ಡ್(ಜು.29): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಸಾಮಾಜಿಕ ತಾಣದಲ್ಲಿ ಕೆಲ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಕೊಹ್ಲಿ ತೆಗಿಸಿಕೊಂಡಿರುವ ಒಂದು ಫೋಟೋ.
ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಉದ್ಯಮಿ ಹಾಗೂ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಜತೆ ಕೊಹ್ಲಿ ಫೋಟೋ ತೆಗಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿದಾಡಿದೆ. ಆದರೆ ಫೋಟೋದಲ್ಲಿರುವುದು ಮಲ್ಯ ಅಲ್ಲ, ಬದಲಿಗೆ ಅವರನ್ನು ಹೋಲುವ ವ್ಯಕಿ
ಎಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಟೀಂ ಇಂಡಿಯಾವನ್ನ ಪಂಜಾಬಿ ಬಾಂಗ್ಡಾ ನೃತ್ಯದ ಮೂಲಕ ಸ್ವಾಗತಿಸಿದ್ದರು. ಸ್ವತಃ ಕೊಹ್ಲಿ ಕೂಡ ಇವರೊಂದಿಗೆ ಒಂದೆರೆಡು ಹೆಜ್ಜೆ ಹಾಕಿದ್ದರು. ಬಳಿಕ ಬಾಂಗ್ಡಾ ನೃತ್ಯಗಾರರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಲ್ಯ ಹೋಲುವ ವ್ಯಕ್ತಿ ಇರೋದು ಈ ಆವಾಂತರಕ್ಕೆ ಕಾರಣವಾಗಿದೆ.