ಇದುವರೆಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 7 ದ್ವಿಶತಕಗಳು ದಾಖಲಾಗಿದ್ದು, ಅದರಲ್ಲಿ 3 ದ್ವಿಶತಕಗಳನ್ನು ರೋಹಿತ್ ಶರ್ಮಾ ಒಬ್ಬರೆ ಬಾರಿಸಿದ್ದಾರೆ. ಇನ್ನುಳಿದ 4 ದ್ವಿಶತಕಗಳು ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್ ಮತ್ತು ಮಾರ್ಟಿನ್ ಗುಪ್ಟಿಲ್ ಹೆಸರಿನಲ್ಲಿವೆ.
ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್'ಮನ್ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್'ನಲ್ಲಿ ಮೂರನೇ ದ್ವಿಶತಕ ಸಿಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್'ನಲ್ಲಿ 3 ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್'ಮನ್ ಎಂಬ ಗೌರವ ರೋಹಿತ್ ಪಾಲಾಗಿದೆ. ಶ್ರೀಲಂಕಾ ವಿರುದ್ಧ ಅಜೇಯ 208 ರನ್ ಸಿಡಿಸಿ ಅಪರೂಪದ ಸಾಧನೆ ಮಾಡಿದ್ದಾರೆ.
ಈ ಮೊದಲು ಶ್ರೀಲಂಕಾ ವಿರುದ್ಧ ಕೋಲ್ಕತದಲ್ಲಿ ನಡೆದಿದ್ದ ಪಂದ್ಯದಲ್ಲಿ 264ರನ್ ಹಾಗೂ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ ಸಿಡಿಸಿದ್ದರು. ಇದುವರೆಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 7 ದ್ವಿಶತಕಗಳು ದಾಖಲಾಗಿದ್ದು, ಅದರಲ್ಲಿ 3 ದ್ವಿಶತಕಗಳನ್ನು ರೋಹಿತ್ ಶರ್ಮಾ ಒಬ್ಬರೆ ಬಾರಿಸಿದ್ದಾರೆ. ಇನ್ನುಳಿದ 4 ದ್ವಿಶತಕಗಳು ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್ ಮತ್ತು ಮಾರ್ಟಿನ್ ಗುಪ್ಟಿಲ್ ಹೆಸರಿನಲ್ಲಿವೆ.
ರೋಹಿತ್ ಶರ್ಮಾರ ಹ್ಯಾಟ್ರಿಕ್ ದ್ವಿಶತಕದ ಸಾಧನೆಯನ್ನು ವಿರೇಂದ್ರ ಸೆಹ್ವಾಗ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ಕೊಂಡಾಡಿದ್ದು ಹೀಗೆ...
