ಕುಂಬ್ಳೆಯಿಂದ 'ಸ್ಮಾರ್ಟ್‌ ಬ್ಯಾಟ್‌' ತಂತ್ರಜ್ಞಾನ!

ಕ್ರಿಕೆಟ್‌ ಹೆಚ್ಚೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಂತೆ, ಹೊಸ ಹೊಸ ತಂತ್ರಜ್ಞಾನಗಳ ಪರಿಚಯವಾಗುತ್ತಿದೆ. ‘ಸ್ಪೆಕ್ಟಾಕಾಮ್‌’ ಬಳಕೆಯಿಂದ ಕ್ರಿಕೆಟ್‌ ವೀಕ್ಷಕರಿಗೆ ಬ್ಯಾಟಿಂಗ್‌ನ ಹಿಂದಿರುವ ಅನೇಕ ಸೂಕ್ಷ್ಮ ವಿಚಾರಗಳ ಪರಿಚಯವಾಗಲಿದೆ. ಜತೆಗೆ ಆಟಗಾರರಿಗೆ ತಮ್ಮ ಬ್ಯಾಟಿಂಗ್‌ ವಿಮರ್ಶೆ ಮಾಡಿಕೊಂಡು, ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳಲು ನೆರವಾಗುವಂಥ ತಂತ್ರಜ್ಞಾನವನ್ನು ಕ್ರಿಕೆಟಿಗ ಅನಿಲ್ ಕುಂಬ್ಳೆ ಕಂಡು ಹಿಡಿದಿದ್ದಾರೆ.

Smart bat technology by Anil kumble

ಚೆನ್ನೈ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಮಾಜಿ ಕೋಚ್‌ ಅನಿಲ್‌ ಕುಂಬ್ಳೆ ಕ್ರಿಕೆಟ್‌ಗೆ ಹೊಸ ತಂತ್ರಜ್ಞಾನ ಪರಿಚಯಿಸುತ್ತಿದ್ದಾರೆ. ಅವರ ಮಾಲೀಕತ್ವದ ಸಂಸ್ಥೆ ‘ಸ್ಪೆಕ್ಟಾಕಾಮ್‌’ ಎನ್ನುವ ತಂತ್ರಜ್ಞಾನವನ್ನು ಹೊರತಂದಿದೆ. ಶುಕ್ರವಾರ ಅವರು ಈ ತಂತ್ರಜ್ಞಾನವನ್ನು ಅನಾವರಣಗೊಳಿಸಿದರು. 2018ರ ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲಿ ಮೊಟ್ಟಮೊದಲ ಬಾರಿಗೆ ಈ ತಂತ್ರಜ್ಞಾನ ಬಳಕೆಯಾಗಲಿದೆ. ಇದನ್ನು ಬಳಸಿಕೊಂಡು ಟೂರ್ನಿಯಲ್ಲಿ ಮೂಡಿಬರುವ ಬ್ಯಾಟಿಂಗ್‌ ಪ್ರದರ್ಶನವನ್ನು ಹೊಸ ಆಯಾಮಗಳಲ್ಲಿ ವಿಮರ್ಶೆ ಮಾಡಬಹುದಾಗಿದೆ.

ಏನಿದು ಸ್ಪೆಕ್ಟಾಕಾಮ್‌ ತಂತ್ರಜ್ಞಾನ?:

ಇದೊಂದು ಸ್ಮಾರ್ಟ್‌ ಸ್ಟಿಕ್ಕರ್‌. ಸಣ್ಣ ಬ್ಯಾಟರಿಯ ಸಹಾಯ ಮಾಡುವ ಸೆನ್ಸಾರ್‌ ಉಳ್ಳ ಸ್ಟಿಕ್ಕರ್‌ ಇದು. ಬ್ಯಾಟ್ಸ್‌ಮನ್‌ ಸ್ಪೆಕ್ಟಾಕಾಮ್‌ ಸ್ಟಿಕ್ಕರ್‌ ಅನ್ನು ತನ್ನ ಬ್ಯಾಟ್‌ನ ಹಿಂಬದಿಯಲ್ಲಿ ಅಂಟಿಸಿದರೆ ಆ ಬ್ಯಾಟ್‌ ‘ಸ್ಮಾರ್ಟ್‌ ಬ್ಯಾಟ್‌’ ಆಗಲಿದೆ. ಈ ತಂತ್ರಜ್ಞಾನವನ್ನು ಬಳಸಿ ಬ್ಯಾಟ್‌ನ ವೇಗ, ಆಟಗಾರ ಚೆಂಡನ್ನು ಬಾರಿಸಲು ಬಳಸುತ್ತಿರುವ ಶಕ್ತಿ, ಚೆಂಡು ಬ್ಯಾಟ್‌ನ ಯಾವ ಭಾಗಕ್ಕೆ ಬಡಿಯಿತು, ಬ್ಯಾಟ್ಸ್‌ಮನ್‌ ಸರಿಯಾದ ಕ್ರಮ ಅನುಸರಿಸಿ ಬ್ಯಾಟ್‌ ಮಾಡುತ್ತಿದ್ದಾನಾ? ಹೀಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. ಮೈಕ್ರೋಸಾಫ್ಟ್‌ ಸಂಸ್ಥೆ ಜತೆ ಕೈಜೋಡಿ ಕುಂಬ್ಳೆ ಈ ತಂತ್ರಜ್ಞಾನವನ್ನು ಹೊರತಂದಿದ್ದಾರೆ. ಕ್ರಿಕೆಟ್‌ ಕೋಚಿಂಗ್‌ಗೂ ಇದು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ಕುಂಬ್ಳೆ ಹೇಳಿದ್ದಾರೆ.

ಏನು ಲಾಭ?:

ಕೆಟ್‌ ಹೆಚ್ಚೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಂತೆ, ಹೊಸ ಹೊಸ ತಂತ್ರಜ್ಞಾನಗಳ ಪರಿಚಯವಾಗುತ್ತಿದೆ. ‘ಸ್ಪೆಕ್ಟಾಕಾಮ್‌’ ಬಳಕೆಯಿಂದ ಕ್ರಿಕೆಟ್‌ ವೀಕ್ಷಕರಿಗೆ ಬ್ಯಾಟಿಂಗ್‌ನ ಹಿಂದಿರುವ ಅನೇಕ ಸೂಕ್ಷ್ಮ ವಿಚಾರಗಳ ಪರಿಚಯವಾಗಲಿದೆ. ಜತೆಗೆ ಆಟಗಾರರಿಗೆ ತಮ್ಮ ಬ್ಯಾಟಿಂಗ್‌ ವಿಮರ್ಶೆ ಮಾಡಿಕೊಂಡು, ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳಲು ನೆರವಾಗಲಿದೆ. ನೇರ ಪ್ರಸಾರದಲ್ಲಿ ಬ್ಯಾಟ್‌ನ ಅಂಕಿ-ಅಂಶಗಳನ್ನು ನೋಡಬಹುದಾಗಿದೆ. ಆ್ಯಂಡ್ರಾಯ್ಡ್‌ ಮೊಬೈಲ್‌ ಆ್ಯಪ್‌ನಲ್ಲೂ ಅಂಕಿ-ಅಂಶಗಳು ಲಭ್ಯವಾಗಲಿದೆ ಎನ್ನಲಾಗಿದೆ.

ಟಿಎನ್‌ಪಿಎಲ್‌ನಲ್ಲಿ ಪ್ರಯೋಗ ನಡೆಸಲಾಗುತ್ತಿದೆ. ಲಕ್ಷಾಂತರ ಅಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸುತ್ತಾರೆ. ವೀಕ್ಷಕರಿಗೆ ಹೊಸ ಅನುಭವ ಸಿಗಲಿದೆ. ಬ್ಯಾಟ್ಸ್‌ಮನ್‌ಗಳಿಗೂ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ನೆರವಾಗಲಿದೆ.

- ಅನಿಲ್‌ ಕುಂಬ್ಳೆ, ಮಾಜಿ ಕ್ರಿಕೆಟಿಗ

Latest Videos
Follow Us:
Download App:
  • android
  • ios