ಭಾರತ ಈ ಸರಣಿಯೊಂದಿಗೆ ಸತತ 9 ಸರಣಿ ಗೆದ್ದು ವಿಶ್ವ ದಾಖಲೆ ನಿರ್ಮಿಸಿತು. ಈ ಮೊದಲು ಆಸ್ಟ್ರೇಲಿಯಾ ತಂಡ ಈ ಸಾಧನೆ ಮಾಡಿತ್ತು  

ನವದೆಹಲಿ(ಡಿ.06): ಆಲ್'ರೌಂಡರ್'ಗಳಾದ ಧನಂಜಯ ಸಿಲ್ವಾ,ರೋಷನ್ ಡಿಸಿಲ್ವಾ ಅವರ ಸಮಯೋಚಿತ ಆಟ ಹಾಗೂ ನಾಯಕ ಚಾಂಡಿಮಲ್ ವಿಕೇಟ್ ಕೀಪರ್ ಅವರ ತಾಳ್ಮೆಯ ಆಟದಿಂದಾಗಿ ಶ್ರೀಲಂಕಾ ತಂಡ ಭಾರತದ ವಿರುದ್ಧ ಸೋಲುವ ಪಂದ್ಯವನ್ನು ಡ್ರಾನಲ್ಲಿ ಸಮಾಪ್ತಿಗೊಳಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

3ನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗುವುದರೊಂದಿಗೆ ಟೀಂ ಇಂಡಿಯಾ ಸರಣಿಯನ್ನು 1-0 ಕೈವಶ ಮಾಡಿಕೊಂಡಿತು. ಭಾರತ ಈ ಸರಣಿಯೊಂದಿಗೆ ಸತತ 9 ಸರಣಿ ಗೆದ್ದು ವಿಶ್ವ ದಾಖಲೆ ನಿರ್ಮಿಸಿತು. ಈ ಮೊದಲು ಆಸ್ಟ್ರೇಲಿಯಾ ತಂಡ ಈ ಸಾಧನೆ ಮಾಡಿತ್ತು ಬೌಲರ್'ಗಳು ದಿನವಿಡಿ ಪರದಾಡಿದರೂ ಲಂಕಾ ಪಡೆಯ 2 ವಿಕೇಟ್'ಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಧನಂಜಯ ಸಿಲ್ವಾ ಅವರ ಆಕರ್ಷಕ ಶತಕ ಹಾಗೂ ರೋಷನ್ ಸಿಲ್ವಾ ಅವರ ಅಜೇಯ ಅರ್ಧ ಶತಕ ತಂಡವನ್ನು ಸೋಲಿನಿಂದ ಪಾರು ಮಾಡಿತು.

2 ಅದ್ಭುತ ಜೊತೆಯಾಟ

ಧನಂಜಯ,ನಾಯಕ ಚಾಂಡಿಮಲ್ ಅವರ 5ನೇ ವಿಕೇಟ್'ಗೆ 112 ರನ್ ಹಾಗೂ ರೋಶನ್ ಸಿಲ್ವಾ, ಕೀಪರ್ ಡಿಕ್'ವೆಲ್ಲಾ ಅವರ 6ನೇ ವಿಕೇಟ್'ಗೆ ಮುರಿಯದ 94 ರನ್'ಗಳ ಜೊತೆಯಾಟ ಟೀಂ ಇಂಡಿಯಾ ಗೆಲುವನ್ನು ಕಿತ್ತುಕೊಂಡಿತು. 219 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 119 ರನ್ ಬಾರಿಸಿದ ಧನಂಜಯ್ ಗಾಯಗೊಂಡ ನಿವೃತ್ತಿಗೊಂಡರು. ಇವರಿಗೆ ಜೊತೆಯಾಗಿದ್ದ ಚಾಂಡಿಮಲ್ 90 ಎಸೆತಗಳಲ್ಲಿ 36 ರನ್ ಗಳಿಸಿ ಅಶ್ವಿನ್'ಗೆ ಬೌಲ್ಡ್ ಆದರು.

ರೋಷನ್ ಸಿಲ್ವಾ 154 ಎಸೆತಗಳಲ್ಲಿ 11 ಬೌಂಡರಿಯೊಂದಿಗೆ 74 ಹಾಗೂ ಡಿಕ್'ವಿಲ್ಲಾ 72 ಚಂಡುಗಳಲ್ಲಿ 6 ಬೌಂಡರಿಗಳೊಂದಿಗೆ ಅಜೇಯರಾಗಿ ಉಳಿದರು. 410 ಗುರಿ ಬೆನ್ನಟ್ಟಿದ ಶ್ರೀಲಂಕಾ ಇನ್ನಿಂಗ್ಸ್ ಅಂತ್ಯಕ್ಕೆ 103 ಓವರ್'ಗಳಲ್ಲಿ 299/5 ರನ್ ಗಳಿಸಿತು. ಕೊನೆಯ ದಿನ ಭಾರತದ ಪರ ಜಡೇಜಾ ಹಾಗೂ ಅಶ್ವಿನ್ ಒಂದೊಂದು ವಿಕೇಟ್ ಮಾತ್ರ ಕಬಳಿಸಿದರು. ಸರಣಿಯಲ್ಲಿ 2 ದ್ವಿಶತಕಗಳೊಂದಿಗೆ ಉತ್ತಮವಾಗಿ ಆಟವಾಡಿದ ನಾಯಕ ಕೊಹ್ಲಿ ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪುರಸ್ಕೃತರಾದರು.

ಸ್ಕೋರ್

ಭಾರತ 536/7ಡಿ ಹಾಗೂ 246/5ಡಿ

ಶ್ರೀಲಂಕಾ 373 ಹಾಗೂ 299/5(103)

(ಧನಂಜಯ ಸಿಲ್ವಾ 119, ರೋಷನ್ ಸಿಲ್ವಾ 74, ಡಿಕ್ವೆಲ್ಲಾ 44, ಚಾಂಡಿಮಾಲ್ 36, ಜಡೇಜಾ 81/3)

ಪಂದ್ಯ ಹಾಗೂ ಸರಣಿ ಶ್ರೇಷ್ಠ: ವಿರಾಟ್ ಕೊಹ್ಲಿ

ಭಾರತಕ್ಕೆ 1-0 ಸರಣಿ ಜಯ