ಲಂಡನ್(ಜು.13): ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ದಾಖಲೆ ಬರೆಯಲು ಸಜ್ಜಾಗಿದ್ದ ಅಮೇರಿಕಾದ ಸೆರೆನಾ ವಿಲಿಯಮ್ಸ್‌ಗೆ ಆಘಾತವಾಗಿದೆ. ಮಹಿಳಾ ಫೈನಲ್ಸ್‌ನಲ್ಲಿ ಸೆರೆನಾ ವಿಲಿಯಮ್ಸ್ ಮಣಿಸಿದ ರೊಮೆನಿಯಾದ ಸಿಮೊನಾ ಹಾಲೆಪ್  ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ. ಹಾಲೆಪ್‌ಗೆ ಇದು ಮೊದಲ ವಿಂಬಲ್ಡನ್ ಪ್ರಸಸ್ತಿ. ಆದರೆ 23 ಗ್ಲ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿದ್ದ ಸೆರೆನಾ ವಿಲಿಯಮ್ಸ್, ಟೆನಿಸ್ ಲೆಜೆಂಡ್, ಆಸ್ಟ್ರೇಲಿಯಾದ ಮಾರ್ಗರೆಟ್ ಕೊರ್ಟ್ 24 ಗ್ರ್ಯಾಂಡ್ ಸ್ಲಾಂ ದಾಖಲೆ ಸರಿಗಟ್ಟೋ ಅವಕಾಶ ಮಿಸ್ ಮಾಡಿಕೊಂಡಿದ್ದಾರೆ.

 

ತಾಯಿಯಾದ  ಬಳಿಕ ಮೊದಲ ಪ್ರಶಸ್ತಿ ಗೆಲ್ಲೋ ಸುವರ್ಣ ಅವಕಾಶ ಪಡೆದ ಸೆರೆನಾ ವಿಲಿಯಮ್ಸ್, ಹಾಲೆಪ್ ವಿರುದ್ದ ಮುಗ್ಗರಿಸಿದರು. ರೋಚಕ ಹೋರಾಟದಲ್ಲಿ ಹಾಲೆಪ್  6-2, 6-2  ಅಂತರದಲ್ಲಿ ಗೆಲುವು ಸಾಧಿಸಿದರು. 9 ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದ ಸೆರೆನಾಗೆ 10ನೇ ಪ್ರಶಸ್ತಿ ಕೈಗೆಟುಕಲಿಲ್ಲ.