ಏಷ್ಯನ್ ಏರ್ ಗನ್ ಶೂಟಿಂಗ್ ಚಾಂಪಿಯನ್ ಶಿಪ್ ಡಿಸೆಂಬರ್ ನಲ್ಲಿ ನಡೆಯಲಿದ್ದು, ಇರಾನ್ ಅಥಿತ್ಯವಹಿಸಿದೆ. ಈ ಸ್ಪರ್ಧೇಯಲ್ಲಿ ಭಾಗವಹಿಸುವ ಮಹಿಳಾ ಸ್ಪರ್ಧಿಗಳೆಲ್ಲ ಡ್ರೆಸ್ ಕೋಡ್ ಪಾಲಿಸಲೇಬೇಕು ಎಂಬ ನಿಯಮವನ್ನು ಹೇರಲಾಗಿದೆ.
ನವದೆಹಲಿ(ಅ.30): ಇರಾನ್ ನಲ್ಲಿ ನಡೆಯಲಿರುವ ಏಷ್ಯನ್ ಏರ್ ಗನ್ ಶೂಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳಾ ಸ್ಪರ್ಥಿಗಳು ಕಡ್ಡಾಯವಾಗಿ ಹಿಜಬ್ ಧರಿಸ ಬೇಕು ಎನ್ನುವ ಹಿನ್ನಲೆಯಲ್ಲಿ ಹಿಜಬ್ ಧರಿಸಲ್ಲ ಎಂದ ಭಾರತದ ಶೂಟರ್ ಹೀನಾ ಸಿಧು ಚಾಂಪಿಯನ್ ಶಿಷ್ ಗೆ ಹೋಗಲ್ಲ ಎಂದಿದ್ದಾರೆ.
ಏಷ್ಯನ್ ಏರ್ ಗನ್ ಶೂಟಿಂಗ್ ಚಾಂಪಿಯನ್ ಶಿಪ್ ಡಿಸೆಂಬರ್ ನಲ್ಲಿ ನಡೆಯಲಿದ್ದು, ಇರಾನ್ ಅಥಿತ್ಯವಹಿಸಿದೆ. ಈ ಸ್ಪರ್ಧೇಯಲ್ಲಿ ಭಾಗವಹಿಸುವ ಮಹಿಳಾ ಸ್ಪರ್ಧಿಗಳೆಲ್ಲ ಡ್ರೆಸ್ ಕೋಡ್ ಪಾಲಿಸಲೇಬೇಕು ಎಂಬ ನಿಯಮವನ್ನು ಹೇರಲಾಗಿದೆ.
ಹಾಗಾಗಿ ಹಿಜಬ್ ಧರಿಸಲು ನಿರಾಕರಿಸಿರುವ ಹೀನಾ, ಹಿಜಬ್ ಹಾಕಿಕೊಳ್ಳುವಂತೆ ಒತ್ತಾಯಿಸುವುದು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾದದ್ದು, ಒತ್ತಾಯಪೂರ್ವಕವಾಗಿ ಇತರೆ ಧರ್ಮದ ಆಚರಣೆಯನ್ನು ಪಾಲಿಸುವುದಿಲ್ಲ. ಈ ಕಾರಣಕ್ಕೆ ಅಲ್ಲಿಗೆ ನಾನು ಹೋಗುವುದೇ ಇಲ್ಲ ಎಂದಿದ್ದಾರೆ.