ಒಂದು ವೇಳೆ ನನ್ನ ಫಾರ್ಮ್ ಕೈಕೊಡದಿದ್ದರೆ, ಇದೇ ರೀತಿಯ ಫಿಟ್'ನೆಸ್ ಕಾಪಾಡಿಕೊಂಡರೆ 2019ರ ಏಕದಿನ ವಿಶ್ವಕಪ್ ಹಾಗೂ 2020ರ ಟಿ20 ವಿಶ್ವಕಪ್ ಆಡಿದ ಬಳಿಕ ನಿವೃತ್ತಿ ಘೊಷಿಸುವುದಾಗಿ 35 ವರ್ಷದ ಶೋಯೆಬ್ ಮಲ್ಲಿಕ್ ತಿಳಿಸಿದ್ದಾರೆ.

ಕರಾಚಿ(ಜು.01): ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಆಧಾರಸ್ತಂಭವಾಗಿರುವ ಮಾಜಿ ನಾಯಕ ಶೋಯೆಬ್ ಮಲ್ಲಿಕ್ ಇದೇ ಮೊದಲ ಬಾರಿಗೆ ತಮ್ಮ ನಿವೃತ್ತಿಯ ಬಗ್ಗೆ ತುಟಿಬಿಚ್ಚಿದ್ದಾರೆ.

ಒಂದು ವೇಳೆ ನನ್ನ ಫಾರ್ಮ್ ಕೈಕೊಡದಿದ್ದರೆ, ಇದೇ ರೀತಿಯ ಫಿಟ್'ನೆಸ್ ಕಾಪಾಡಿಕೊಂಡರೆ 2019ರ ಏಕದಿನ ವಿಶ್ವಕಪ್ ಹಾಗೂ 2020ರ ಟಿ20 ವಿಶ್ವಕಪ್ ಆಡಿದ ಬಳಿಕ ನಿವೃತ್ತಿ ಘೊಷಿಸುವುದಾಗಿ 35 ವರ್ಷದ ಶೋಯೆಬ್ ಮಲ್ಲಿಕ್ ತಿಳಿಸಿದ್ದಾರೆ.

ಐಸಿಸಿಯ ಪ್ರತಿಷ್ಠಿತ ಮೂರು ಪ್ರಶಸ್ತಿಗಳನ್ನು ಗೆದ್ದ ತಂಡವನ್ನು ಪ್ರತಿನಿಧಿಸಿದ ಪಾಕಿಸ್ತಾನದ ಏಕೈಕ ಕ್ರಿಕೆಟಿಗನಾಗಬೇಕೆಂಬ ಆಸೆಯಿದೆ ಎಂದಿರುವ ಭಾರತದ ಅಳಿಯ ಮಲ್ಲಿಕ್, ದೇಶಕ್ಕೆ 2019ರ ಏಕದಿನ ವಿಶ್ವಕಪ್ ಗೆದ್ದುಕೊಡಬೇಕು ಎಂಬ ತುಡಿತವಿದೆ ಎಂದಿದ್ದಾರೆ.

'ಐಸಿಸಿಯ ಮೂರು ಪ್ರಶಸ್ತಿಗಳನ್ನು ಎತ್ತಿಹಿಡಿಯಬೇಕೆಂಬ ಆಸೆಯಿದೆ. ತಂಡದ ಹಿರಿಯ ಆಟಗಾರನಾಗಿರುವ ಆಧಾರದಲ್ಲಿ ನನ್ನ ಪ್ರದರ್ಶನದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಸದ್ಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವುದು ನನ್ನಲ್ಲಿ ಇನ್ನಷ್ಟು ಆಶಾವಾದ ಮೂಡುವಂತೆ ಮಾಡಿದೆ ಎಂದು ಮಲ್ಲಿಕ್ ಹೇಳಿದ್ದಾರೆ.

ಮಲ್ಲಿಕ್ 2009ರ ಟಿ20 ವಿಶ್ವಕಪ್ ಹಾಗೂ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಸದಸ್ಯರಾಗಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಮಲ್ಲಿಕ್ ನಾಲ್ಕು ಪಂದ್ಯಗಳಲ್ಲಿ 11,12, 15 ಮತ್ತು 16 ರನ್ ಮಾತ್ರ ಗಳಿಸಿದ್ದರು.