ಕಿವೀಸ್ ಎದುರು ಸೆಪ್ಟಂಬರ್ 22 ರಿಂದ ಆರಂಭವಾಗಲಿರುವ ಮೂರು ಟೆಸ್ಟ್ ಪಂದ್ಯಗಳಿಗೆ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿಯು 15 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಮೊದಲ ಟೆಸ್ಟ್ ಪಂದ್ಯ ಕಾನ್ಪುರ(ಸೆ.22-26)ದಲ್ಲಿ ನಡೆಯಲಿದೆ. ಆನಂತರ ಕೋಲ್ಕತಾ(ಸೆ.30-ಅ.4), ಅಂತಿಮ ಟೆಸ್ಟ್ ಪಂದ್ಯ ಇಂದೋರ್(ಅ.8-12)ರ ವರೆಗೆ ನಡೆಯಲಿದೆ.

ನವದೆಹಲಿ(ಸೆ.12): ತವರಿನಲ್ಲಿ ನ್ಯೂಜಿಲೆಂಡ್ ಎದುರು ನಡೆಯಲಿರುವ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ದೆಹಲಿಯ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹಾಗೂ ಹರ್ಭಜನ್ ಸಿಂಗ್ ಅವರು ತಂಡದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ವಿಫಲವಾಗಿದ್ದಾರೆ.

ಕಿವೀಸ್ ಎದುರು ಸೆಪ್ಟಂಬರ್ 22 ರಿಂದ ಆರಂಭವಾಗಲಿರುವ ಮೂರು ಟೆಸ್ಟ್ ಪಂದ್ಯಗಳಿಗೆ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿಯು 15 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಮೊದಲ ಟೆಸ್ಟ್ ಪಂದ್ಯ ಕಾನ್ಪುರ(ಸೆ.22-26)ದಲ್ಲಿ ನಡೆಯಲಿದೆ. ಆನಂತರ ಕೋಲ್ಕತಾ(ಸೆ.30-ಅ.4), ಅಂತಿಮ ಟೆಸ್ಟ್ ಪಂದ್ಯ ಇಂದೋರ್(ಅ.8-12)ರ ವರೆಗೆ ನಡೆಯಲಿದೆ.

ದುಲೀಪ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಗೌತಮ್ ಗಂಭೀರ್ ಆಯ್ಕೆಯಾಗದಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂದೀಪ್ ಪಾಟೀಲ್. ನಾವು ಯಾವುದೇ ಹಿರಿಯ ಆಟಗಾರರನ್ನು ಕಡೆಗಣಿಸಿಲ್ಲ. ನಾವು ಸರಿಯಾದ ಸಮತೋಲನದಿಂದ ಕೂಡಿದ ತಂಡವನ್ನೇ ಆಯ್ಕೆ ಮಾಡಿದ್ದೇವೆ ಎಂದಿದ್ದಾರೆ.

ಟೀಂ ಇಂಡಿಯಾ ಆಟಗಾರರ ಪಟ್ಟಿ ಇಂತಿದೆ:

ವಿರಾಟ್ ಕೊಹ್ಲಿ(ನಾಯಕ), ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ಮುರುಳಿ ವಿಜಯ್, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್, ವೃದ್ದಿಮಾನ್ ಸಾಹ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ಶಿಖರ್ ಧವನ್, ಅಮಿತ್ ಮಿಶ್ರಾ ಹಾಗೂ ಉಮೇಶ್ ಯಾದವ್