ರನ್ ಮಾಡು ಈ ಸಲ, ಇಲ್ಲವಾದರೆ ಮುಖ ತೋರಿಸಬೇಡ ಇನ್ನೊಂದು ಸಲ. ರನ್ ಹೊಡೆತ್ತಿರುವುದು ಝೀರೋ, ಇನ್ನು ಹೇಗೆ ಆಗೋದು ಹೀರೋ. ಇವೆಲ್ಲಾ ಶಿಖರ್ ಧವನ್ ಕಾವ್ಯಾತ್ಮ ಸಾಲುಗಳಿಗೆ ಅಭಿಮಾನಿಗಳ ಪ್ರತಿಕ್ರಿಯೆ. ಅಷ್ಟಕ್ಕು ಧವನ್‌ಗೆ ಈ ರೀತಿ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದೇಕೆ? ಇಲ್ಲಿದೆ ಮಾಹಿತಿ.
ಲಂಡನ್(ಜು.30): ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಅಭ್ಯಾಸ ಪಂದ್ಯ ಮುಗಿಸಿದೆ. ಇದೀಗ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಎಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಧವನ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು.
ಶಿಖರ್ ಧವನ್ ಬ್ಯಾಟಿಂಗ್‌ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಡಕೌಟ್‌ನಿಂದಾಗಿ ಧವನ್ ಟೀಕೆಗೂ ಗುರಿಯಾಗಿದ್ದರು. ಎಸೆಕ್ಸ್ ವಿರುದ್ಧ ಪಂದ್ಯದಲ್ಲಿ ಧವನ್ , ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜರ ಜೊತೆ ಸ್ಲಿಪ್ ಫೀಲ್ಡಿಂಗ್‌ನಲ್ಲಿ ನಿಂತಿದ್ದರು. ಈ ಫೋಟೋವನ್ನ ಧವನ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದರು.
ಈ ಪೋಸ್ಟ್ ಜೊತೆಗೆ ಕೊಹ್ಲಿ ಹಾಗೂ ಪೂಜಾರ ಜೊತೆಗಿದ್ದರೆ ಯಶಸ್ಸು ದೂರವಿಲ್ಲ ಅನ್ನೋದನ್ನ ಕಾವ್ಯಾತ್ಮಕವಾಗಿ ಹೇಳಿದ್ದರು. ಆದರೆ ಧವನ್ ಸುಂದರ ಸಾಲುಗಳಿಗೆ ಅಭಿಮಾನಿಗಳು ಅಷ್ಟೇ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ.
ರನ್ ಮಾಡು ಈ ಸಲ, ಇಲ್ಲವಾದರೆ ಮುಖ ತೋರಿಸಬೇಡ ಇನ್ನೊಂದು ಸಲ ಎಂದು ಫ್ಯಾನ್ಸ್ ಟ್ವೀಟ್ ಮಾಡಿದ್ದಾರೆ. ರನ್ ಹೊಡೆತ್ತಿರುವುದು ಝೀರೋ, ಇನ್ನು ಹೇಗೆ ಆಗೋದು ಹೀರೋ ಸೇರಿದಂತೆ ಹಲವು ಕಾವ್ಯತ್ಮಕ ಟ್ವೀಟ್‌ಗಳನ್ನ ಅಭಿಮಾನಿಗಳು ಮಾಡಿದ್ದಾರೆ.
