ಕ್ರಿಸ್ ಗೇಲ್ ಜಮೈಖಾದ ‘ದಲೇರ್ ಮೆಹಂದಿ’ ಅಂತೆ..!

Shikhar Dhawan Calls Chris Gayle The 'Jamaican Daler Mehndi'
Highlights

ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಅವರಿಗೆ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಶಿಖರ್ ಧವನ್ ಜಮೈಖಾದ ‘ದಲೇರ್ ಮೆಹಂದಿ’ ಎಂದು ಹೊಸ ಹೆಸರನ್ನಿಟ್ಟಿದ್ದಾರೆ.

ಮುಂಬೈ(ಜೂ.1): ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಅವರಿಗೆ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಶಿಖರ್ ಧವನ್ ಜಮೈಖಾದ ದಲೇರ್ ಮೆಹಂದಿ ಎಂದು ಹೊಸ ಹೆಸರನ್ನಿಟ್ಟಿದ್ದಾರೆ.

ಐಪಿಎಲ್ ಪಂದ್ಯಾವಳಿ ನಂತರ ನಡೆದ ಸಮಾರಂಭದಲ್ಲಿ ಕ್ರಿಸ್ ಗೇಲ್ ಅವರನ್ನು ಭೇಟಿಯಾದ ಫೋಟೋವನ್ನು ಶಿಖರ್ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ. ನಾನು ಜಮೈಖಾದ ದಲೇರ್ ಮೆಹಂದಿ ಅವರನ್ನು ಭೇಟಿಯಾಗಿದ್ದಾಗಿ ಶಿಖರ್ ಹೇಳಿದ್ದಾರೆ.  ಅಲ್ಲದೇ ಮೈದಾನದ ಒಳಗೂ ಮತ್ತು ಮೈದಾನದ ಹೊರಗೂ ಗೇಲ್ ಅವರ ಆತ್ಮೀಯ ಗೆಳೆತನವನ್ನು ಶಿಖರ್ ನೆನೆದಿದ್ದಾರೆ.

ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಕ್ರಿಸ್ ಗೇಲ್ ಕಿಂಗ್ಸ್ ಇಲೆವನ್ ಪಂಜಾಬ್ ಪರ ಆಡಿದ್ದರೆ, ಶಿಖರ್ ಧವನ್ ಸನ್ ರೖಸರ್ಸ್ ಹೈದರಾಬಾದ್ ಪರ ಆಡಿದ್ದರು. 11 ಪಂದ್ಯಗಳನ್ನಾಡಿದ್ದ ಗೇಲ್ 368 ರನ್ ಬಾರಿಸಿದ್ದರೆ, ಶಿಖರ್ 16 ಪಂದ್ಯಗಳಿಂದ 497 ರನ್ ಸಿಡಿಸಿದ್ದರು.

loader