ಇದನ್ನು ವರ್ಷದ ಅತಿ ಕೆಟ್ಟ ಎಸೆತ ಎನ್ನಬಹುದೇ..?

Sheldon Cottrell bowls one of the most bizarre deliveries ever
Highlights

ಆ್ಯಂಡ್ರೆ ರಸೆಲ್ ಬದಲಿಗೆ ವಿಂಡಿಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಶೆಲ್ಡನ್ ಕಾಟ್ರೆಲ್ ಮೊದಲ ಓವರ್’ನಲ್ಲಿಯೇ ಕೆಟ್ಟ ಎಸೆತ ಹಾಕುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಹೌದು, ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಕಾಟ್ರೆಲ್ ತಾವೆಸದ ನಾಲ್ಕನೇ ಎಸೆತವನ್ನು ನೇರವಾಗಿ ಎಸೆದದ್ದು ಎರಡನೇ ಸ್ಲಿಪ್’ನಲ್ಲಿದ್ದ ಆ್ಯಶ್ಲೆ ನರ್ಸ್’ಗೆ..!

ಬೆಂಗಳೂರು[ಜು.31]: ವೆಸ್ಟ್’ಇಂಡಿಸ್-ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಅತಿ ಅಪರೂಪದ ಸನ್ನಿವೇಷಕ್ಕೆ ಸಾಕ್ಷಿಯಾಗಿದ್ದು, ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆ್ಯಂಡ್ರೆ ರಸೆಲ್ ಬದಲಿಗೆ ವಿಂಡಿಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಶೆಲ್ಡನ್ ಕಾಟ್ರೆಲ್ ಮೊದಲ ಓವರ್’ನಲ್ಲಿಯೇ ಕೆಟ್ಟ ಎಸೆತ ಹಾಕುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಹೌದು, ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಕಾಟ್ರೆಲ್ ತಾವೆಸದ ನಾಲ್ಕನೇ ಎಸೆತವನ್ನು ನೇರವಾಗಿ ಎಸೆದದ್ದು ಎರಡನೇ ಸ್ಲಿಪ್’ನಲ್ಲಿದ್ದ ಆ್ಯಶ್ಲೆ ನರ್ಸ್’ಗೆ..! ಅಂಪೈರ್ ಮರು ಯೋಚನೆ ಮಾಡದೇ ನೋಬಾಲ್ ನೀಡಿದರು. 

ಹೀಗಿತ್ತು ಆ ಕ್ಷಣ:

ಕ್ರಿಸ್ ಗೇಲ್, ರೋಮನ್ ಪೋವೆಲ್ ಅವರ ಆಕರ್ಷಕ ಅರ್ಧಶತಕದ ಹೊರತಾಗಿಯೂ ವೆಸ್ಟ್’ಇಂಡಿಸ್ ತಂಡವು ಬಾಂಗ್ಲಾದೇಶಕ್ಕೆ 18 ರನ್’ಗಳಿಂದ ಶರಣಾಯಿತು. ಈ ಮೂಲಕ ತ್ರಿಕೋನ ಟಿ20 ಸರಣಿಯನ್ನು ಬಾಂಗ್ಲಾದೇಶ 2-1 ಅಂತರದಲ್ಲಿ ಜಯಿಸಿತು. 

loader