ಶಪಥ್ ಈಗಾಗಲೇ ಹಿರಿಯ ಶೂಟರ್'ಗಳಾದ ಅಂಕುರ್ ಮಿತ್ತಲ್, ಸಂಗ್ರಾಮ್ ದಾಹೀಯರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ನವದೆಹಲಿ(ಆ.08): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ 'ಟಾರ್ಗೆಟ್ ಒಲಿಂಪಿಕ್ ಪೋಡಿಯಂ(TOP)ಗೆ 15 ವರ್ಷದ ಶೂಟರ್ ಶಪಥ್ ಭಾರದ್ವಾಜ್ ಆಯ್ಕೆಯಾಗಿದ್ದಾರೆ.
ಒಲಿಂಪಿಕ್ಸ್'ನಲ್ಲಿ ಉತ್ತಮ ಸಾಧನೆ ತೋರುವ ದೃಷ್ಟಿಯಿಂದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಅಂತರಾಷ್ಟ್ರೀಯ ಮಟ್ಟದ ತರಭೇತಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ.
ಇದೇ ಯೋಜನೆಯಡಿ ಒಲಿಂಪಿಕ್ಸ್'ನಲ್ಲಿ ಪದಕ ಗೆದ್ದಿರುವ ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ಸೈನಾ ನೆಹ್ವಾಲ್ ಸೇರಿದಂತೆ ಒಟ್ಟು 45 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಶಪಥ್ ಈಗಾಗಲೇ ಹಿರಿಯ ಶೂಟರ್'ಗಳಾದ ಅಂಕುರ್ ಮಿತ್ತಲ್, ಸಂಗ್ರಾಮ್ ದಾಹೀಯರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.