.

ಕೋಲ್ಕತಾ(ಡಿ.15): ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಭಾರತದ ಟೆಸ್ಟ್ ತಜ್ಞರಿಗೆ ರಣಜಿ ಟ್ರೋಫಿ ಸೆಮಿಫೈನಲ್'ನಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿದೆ. ವೇಗಿ ಮೊಹಮದ್ ಶಮಿ ಹಾಗೂ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಬಂಗಾಳ ತಂಡದಲ್ಲಿ ಸ್ಥಾನ

ಪಡೆದಿದ್ದಾರೆ. ವಿದರ್ಭ ವಿರುದ್ಧ ಸೆಮೀಸ್ ಆಡಲಿರುವ ಕರ್ನಾಟಕ ತಂಡದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಕೆ. ಎಲ್.ರಾಹುಲ್ ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇಶಾಂತ್ ಶರ್ಮಾ ಗಾಯದ ಕಾರಣ ದೆಹಲಿ ಪರ ಆಡುತ್ತಿಲ್ಲ. ಡಿ.17ರಿಂದ ಸೆಮೀಸ್ ಆರಂಭಗೊಳ್ಳಲಿದ್ದು, ಈ ಪಂದ್ಯದ ಬಳಿಕ ಭಾರತ ತಂಡ ಆಫ್ರಿಕಾಕ್ಕೆ ವಿಮಾನ ಹತ್ತಲಿದೆ.