ಕರಾ​ಚಿ(ಸೆ.13) : ಪಾಕಿ​ಸ್ತಾ​ನದ ಹಿರಿಯ ಕ್ರಿಕೆ​ಟಿಗ ಶಾಹೀದ್‌ ಅಫ್ರಿದಿ ಮತ್ತೊಮ್ಮೆ ತಮ್ಮ ಅಂತಾ​ರಾ​ಷ್ಟ್ರೀಯ ವೃತ್ತಿ​ಜೀ​ವ​ನಕ್ಕೆ ತೆರೆ ಎಳೆ​ಯಲು ಮನಸ್ಸು ಮಾಡಿ​ದ್ದಾರೆ.

ಶೀಘ್ರ​ದಲ್ಲೇ ಯುಎ​ಇ​ನಲ್ಲಿ ನಡೆ​ಯ​ಲಿ​ರುವ ವೆಸ್ಟ್‌ಇಂಡೀಸ್‌ ವಿರು​ದ್ಧದ ಟಿ20 ಸರ​ಣಿಯ ನಂತರ ನಿವೃತ್ತಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ಅವರು ಅಂತಾ​ರಾ​ಷ್ಟ್ರೀಯ ವೃತ್ತಿ​ಜೀ​ವ​ನಕ್ಕೆ ವಿದಾಯ ಹೇಳಿ​ದ್ದ​ರಾ​ದರೂ, ನಿವೃತ್ತಿ ನಿರ್ಧಾರದಿಂದ ಹೊರಬಂದಿದ್ದರು.

ಇದೇ ವರ್ಷದಾರಂಭ​ದಲ್ಲಿ ನಡೆ​ದಿದ್ದ 2016ರ ಟಿ20 ವಿಶ್ವ​ಕಪ್‌ ನಂತ​ರ ಪುನಃ ನಿವೃತ್ತಿ ಘೋಷಿಸುವು​ದಾಗಿ ಹೇಳಿ​ಕೊಂಡಿದ್ದ ಅವರು, ಆನಂತರವೂ ನಿರ್ಧಾರ ಬದ​ಲಿ​ಸಿದ್ದರು. ಇದೆಲ್ಲದರ ಹಿನ್ನೆಲೆಯಲ್ಲಿ ಪಾಕಿ​ಸ್ತಾನ ಕ್ರಿಕೆಟ್‌ ಮಂಡ​ಳಿ (ಪಿ​ಸಿ​ಬಿ) ನಿವೃತ್ತಿ ಕುರಿತು ಖಚಿತ ನಿರ್ಧಾರ ತಳೆಯಬೇಕೆಂದು ಅಫ್ರಿದಿಯನ್ನು ಕೋರಿತ್ತು.