Asianet Suvarna News Asianet Suvarna News

ಧೋನಿಗಾಗಿ ಪೈಜಾಮ ಮಾರಲೂ ರೆಡಿ ಎಂದ ಶಾರುಖ್ ಖಾನ್!

ಎಂ.ಎಸ್​​ ಧೋನಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅವರ ಮ್ಯಾಚ್​​​ ವಿನ್ನಿಂಗ್​​ ಅಬಿಲಿಟಿಗೆ ವಿಶ್ವವೇ ತಲೆಬಾಗುತ್ತದೆ. IPL ಫ್ರಾಂಚೈಸಿಗಳಂತೂ ಧೋನಿ ನಮ್ಮ ತಂಡದಲ್ಲಿದ್ದಿದ್ದರೆ ಹೇಗಿರುತ್ತಿತ್ತಪ್ಪ ಅಂತ ಕನಸು ಕಾಣುತ್ತಾರೆ. ಆದರೆ ಸದ್ಯ  IPL ಫ್ರಾಂಚೈಸಿಯೊಬ್ಬ ಧೋನಿ ಏನಾದರೂ ಹರಾಜಿಗೆ ಬಂದರೆ ತನ್ನ ಪೈಜಾಮವನ್ನಾದರೂ ಮಾರಿ ಅವರನ್ನು ಖರಿದಿಸುತ್ತಾರಂತೆ. ಅಷ್ಟಕ್ಕೂ ಆ ಫ್ರಾಂಚೈಸಿ ಹೀಗೆ ಹೇಳಲು ಕಾರಣವೇನು.? ಈ ರೀತಿಯ ಹೇಳಿಕೆ ನೀಡಿದ ಆ ಫ್ರಾಂಚೈಸಿ ಯಾವುದು? ಇಲ್ಲಿದೆ ವಿವರ.

Shah Rukh Khan Ready to Sell his Pyjama to Make MS Dhoni a Kolkata Knight Riders Player

ನವದೆಹಲಿ(ಎ.27): ಎಂ.ಎಸ್​​ ಧೋನಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅವರ ಮ್ಯಾಚ್​​​ ವಿನ್ನಿಂಗ್​​ ಅಬಿಲಿಟಿಗೆ ವಿಶ್ವವೇ ತಲೆಬಾಗುತ್ತದೆ. IPL ಫ್ರಾಂಚೈಸಿಗಳಂತೂ ಧೋನಿ ನಮ್ಮ ತಂಡದಲ್ಲಿದ್ದಿದ್ದರೆ ಹೇಗಿರುತ್ತಿತ್ತಪ್ಪ ಅಂತ ಕನಸು ಕಾಣುತ್ತಾರೆ. ಆದರೆ ಸದ್ಯ  IPL ಫ್ರಾಂಚೈಸಿಯೊಬ್ಬ ಧೋನಿ ಏನಾದರೂ ಹರಾಜಿಗೆ ಬಂದರೆ ತನ್ನ ಪೈಜಾಮವನ್ನಾದರೂ ಮಾರಿ ಅವರನ್ನು ಖರಿದಿಸುತ್ತಾರಂತೆ. ಅಷ್ಟಕ್ಕೂ ಆ ಫ್ರಾಂಚೈಸಿ ಹೀಗೆ ಹೇಳಲು ಕಾರಣವೇನು.? ಈ ರೀತಿಯ ಹೇಳಿಕೆ ನೀಡಿದ ಆ ಫ್ರಾಂಚೈಸಿ ಯಾವುದು? ಇಲ್ಲಿದೆ ವಿವರ.

ಬ್ಯಾಟ್​​'ನಿಂದಲೇ ಉತ್ತರಿಸುತ್ತಿರುವ ಬೆಸ್ಟ್​​ ಫಿನಿಷರ್​​​​

ಆತ ವಿಶ್ವ ಕಂಡ ಬೆಸ್ಟ್​​​ ಕ್ಯಾಪ್ಟನ್​​, ಟೀಂ ಇಂಡಿಯಾದ ಮ್ಯಾಚ್​​ ವಿನ್ನರ್. ಲೈಟನ್ನಿಂಗ್​​ ಸ್ಪೀಡ್​​ ಕೀಪರ್. ಎಂಥಹ ಕಠಿಣ ಪಂದ್ಯಾವಾದರೂ ಸರಾಗವಾಗಿ ಮ್ಯಾಚ್​​ ಫಿನಿಷ್​​ ಮಾಡಬಲ್ಲ ಚಾಣಾಕ್ಷ. ಇದು ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್​​ಮನ್​​ ಎಂ.ಎಸ್​​ ಧೋನಿಯ ಫ್ರೋಫೈಲ್​​​​​​.

ಧೋನಿ ವಿಶ್ವದ ಲೆಜೆಂಡ್​​​ ಕ್ರಿಕೆಟರ್​​​ ಅನ್ನಿಸಿದರೂ ಇವರ ಮೇಲಿನ ಟೀಕೆ ಟಿಪ್ಪಣಿಗಳು ಕಮ್ಮಿಯಾಗಿಲ್ಲ. ಅದರಲ್ಲೂ ಟೀಂ ಇಂಡಿಯಾದ ನಾಯಕತ್ವ ತೊರೆದ ಮೇಲಂತೂ ಧೋನಿಯ ಮೇಲೆ ಟೀಕಾಕಾರರು ಎರಗಿ ಬೀಳುತ್ತಿದ್ದಾರೆ. ಇವರು ಕ್ರಿಕೆಟ್​​'ಗೆ ವಿದಾಯ ಹೇಳುವುದೇ ಉತ್ತಮ ಅಂತೆಲ್ಲಾ ಟೀಕಿಸಿದ್ದಾರೆ. ಸ್ವತಃ ಧೋನಿ ಪ್ರತಿನಿಧಿಸುತ್ತಿರುವ ಪುಣೆ ತಂಡದ ಮಾಲಿಕನೇ ಧೋನಿಯ ಆಟ ಮುಗೀತು ಅಂತೆಲ್ಲಾ ಪರೋಕ್ಷವಾಗಿ ಟೀಕಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ತಂಡದ ನಾಯಕತ್ವದಿಂದಲೂ ಕೆಳಗಿಳಿಸಿದ್ದಾರೆ.

ಟೀಕೆಗಳ ನಡುವಲ್ಲೇ IPL ಫ್ರಾಂಚೈಸಿ ಬಿಗ್​ ಬಾಂಬ್​​​: ಧೋನಿಗಾಗಿ ಪೈಜಾಮ ಮಾರಲು ಶಾರೂಖ್​​ ರೆಡಿ

ಸದ್ಯ ಧೋನಿಯನ್ನು ಟೀಕಿಸುವುದರಲ್ಲೇ ತಲ್ಲೀನರಾಗಿರುವ ಟೀಕಾಕಾರರು ಒಂದು ಕಡೆಯಾದರೆ. ಧೋನಿಯ ಇವರೆಗಿನ ಯಶಸನ್ನು ಆರಾಧಿಸಿ ಅವರನ್ನು ಇನ್ನೂ ನಂಬುವವರು ಒಂದು ಕಡೆ. ಧೋನಿಯನ್ನು ಇನ್ನೂ ಸಹ ನಂಬುವವರಲ್ಲಿ KKR ತಂಡದ ಫ್ರಾಮಚೈಸಿ ಶಾರೂಖ್​​ ಖಾನ್​​ ಕೂಡ ಒಬ್ಬರು. ಸದ್ಯ ಈ ಬಾಲಿವುಡ್​​ ಬಾದ್​ಶಾ ನೀಡಿರುವ ಒಂದು ಹೇಳಿಕೆ ಕೇವಲ ಟೀಕಾಕಾರಿಗಲ್ಲ ಕ್ರಿಕೆಟ್​​​ ಪಂಡಿತರು, ಅಭಿಮಾನಿಗಳಿಗು ದಂಗು ಬಡಿಸಿದೆ.

ಎಂ.ಎಸ್​​ ಧೋನಿ ಏನಾದರೂ ಮುಂದಿನ ವರ್ಷ ಹರಾಜು ಪ್ರಕ್ರಿಯೆಗೆ ಒಳಪಟ್ಟರೆ, ನಾನು ನನ್ನ ಪೈಜಾಮವನ್ನಾದರೂ ಮಾರಿ ಧೋನಿಯನ್ನ ನನ್ನ ತಂಡಕ್ಕೆ ಖರೀಧಿಸುತ್ತೇನೆ. ಎಂದು KKR ಮಾಲಿಕ ಶಾರೂಖ್​​ ಹೇಳಿಕೊಂಡಿದ್ದಾರೆ.

ಶಾರೂಖ್​​ ಹೀಗೆ ಹೇಳಲು ಕಾರಣವೂ ಇದೆ. ಹತ್ತು ವರ್ಷಗಳ ಕಾಲ ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿ. IPL ನಲ್ಲೂ ಚೆನ್ನೈ ತಂಡವನ್ನು ಎರಡು ಬಾರಿ ಚಾಂಪಿಯನ್​ ಆಗಿಸಿದ ಕೀರ್ತಿ ಧೋನಿಯದ್ದು. ಹೀಗಾಗಿ ಶಾರೂಖ್​​ ಧೋನಿಯ ಆಟಕ್ಕಿಂತ ಅವರ ಬುದ್ಧಿವಂತಿಕೆಗೆ ಹೆಚ್ಚು ಬೆಲೆ ನೀಡಿದ್ದಾರೆ ಶಾರೂಖ್​​.

ಸದ್ಯ ಮುಂದಿನ ವರ್ಷ ರಾಜಸ್ಥಾನ ರಾಯಲ್ಸ್​​ ಮತ್ತು ಚೆನ್ನೈ ಸೂಪರ್​​ ಕಿಂಗ್ಸ್​​ ತಂಡಗಳು ಎರಡು ವರ್ಷದ ನಿಷೇಧದ ಬಳಿಕ ಮತ್ತೆ ಕಮ್ ​ಬ್ಯಾಕ್​ ಮಾಡುತ್ತಿವೆ. ಒಂದು ವೇಳೆ BCCI 10 ತಂಡಗಳಾಡಲು ಅವಕಾಶ ನೀಡದಿದ್ದರೆ ಆಗ ಪುಣೆ ಸೂಪರ್​​ ಜೈಂಟ್​​ ಮತ್ತು ಗುಜರಾತ್​​ ಲಯನ್ಸ್​​ ಟೂರ್ನಿಯಿಂದ ಹೊರ ಬೀಳುತ್ತವೆ. ಆಗ ಆ ಎರಡು ತಂಡದ ಆಟಗಾರರು ಮತ್ತೆ ಹರಾಜಿಗೆ ಬರುತ್ತಾರೆ. ಇಷ್ಟೆಲ್ಲಾ ಆದರೆ ಮುಂದಿನ ವರ್ಷ ಧೋನಿ KKR ತಂಡದಲ್ಲಿ ಆಡುವುದು ಬಹುತೇಕ ಖಚಿತ. ಏನೇ ಆದರೂ ಶಾರೂಖ್'​ರ ಈ ಹೇಳಿಕೆ ದಂಗು ಬಡಿಸುತ್ತಿರುವುದಂತು ಸುಳ್ಳಲ್ಲ.

 

Follow Us:
Download App:
  • android
  • ios