27 ವರ್ಷದ ಶಫಾಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವಿ. ಆಫ್ಘಾನಿಸ್ತಾನ ಪರ 35 ಟಿ20 ಹಾಗೂ 20 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಧೋನಿಯಂತೆ ವಿಕೆಟ್'ಕೀಪರ್ ಬ್ಯಾಟ್ಸ್'ಮ್ಯಾನ್ ಆಗಿರುವ ಅವರು ಮೂರು ಬಾರಿ ಟಿ20 ವಿಶ್ವಕಪ್'ನಲ್ಲಿ ಆಡಿದ್ದಾರೆ.

ಕಾಬೂಲ್(ಜುಲೈ 11): ಆಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಏರುಗತಿಯಲ್ಲಿ ಮುಂದುವರಿದಿದೆ. ಹೊಸ ಹೊಸ ಸ್ಟಾರ್'ಗಳು ಸಂಚಲನ ಸೃಷ್ಟಿಸುತ್ತಿದ್ದಾರೆ. ರಷೀದ್ ಖಾನ್, ಮೊಮಹ್ಮದ್ ನಬಿಯಂತಹ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ಅದ್ಭುತ ರೀತಿಯಲ್ಲಿ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದಾರೆ. ಇದೀಗ ಮತ್ತೊಬ್ಬ ಆಫ್ಘನ್ ಕ್ರಿಕೆಟ್ ಸದ್ದು ಮಾಡುತ್ತಿದ್ದಾರೆ. ಸ್ಥಳೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶಫಿಕುಲ್ಲಾ ಶಫಾಕ್ ಅವರು ಕೇವಲ 71 ಎಸೆತದಲ್ಲಿ 214 ರನ್ ಚಚ್ಚಿದ್ದಾರೆ. ಬರೋಬ್ಬರಿ 304 ಸ್ಟ್ರೈಕ್ ರೇಟ್ ಇದ್ದ ಇವರ ಇನ್ನಿಂಗ್ಸಲ್ಲಿ 21 ಸಿಕ್ಸರ್, 16 ಬೌಂಡರಿಗಳಿದ್ದವು.

ಪ್ಯಾರಗಾನ್ ನಂಗರಾರ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಸಾಧನೆ ಬಂದಿದೆ. ಶಫಾಕ್ ಅವರ ಸ್ಫೋಟಕ ಬ್ಯಾಟಿಂಗ್ ಫಲವಾಗಿ ಖತೀಜ್ ಕ್ರಿಕೆಟ್ ಅಕಾಡೆಮಿಯು 244 ರನ್'ಗಳಿಂದ ಕಾಬೂಲ್ ಸ್ಟಾರ್ ಕ್ರಿಕೆಟ್ ಕ್ಲಬ್'ನ್ನು ಸದೆಬಡಿಯಿತು. ಖತೀಜ್ ಅಕಾಡೆಮಿ ಗಳಿಸಿದ 351 ರನ್'ಗೆ ಪ್ರತಿಯಾಗಿ ಕಾಬೂಲ್ ಕ್ಲಬ್'ನ ಇನ್ನಿಂಗ್ಸ್ ಕೇವಲ 107 ರನ್'ಗೆ ಅಂತ್ಯವಾಯಿತು.