ವಿಂಬಲ್ಡನ್: ನಂ.1 ಸ್ಥಾನದಲ್ಲಿ ಮಿಂಚಿದ್ದ ಸೆರೆನಾಗೆ 25ನೇ ಶ್ರೇಯಾಂಕ

Serena Williams will return to Wimbledon as No 25 seed
Highlights

ಸೆರೆನಾಗೆ ನೀಡಿರುವ ಸ್ಥಾನದ ಕುರಿತು ಸಮರ್ಥಿಸಿಕೊಂಡಿರುವ ಆಯೋಜಕರು, ತಾಯ್ತನದ ಬಳಿಕ ಟೆನಿಸ್ ಅಂಗಳಕ್ಕೆ ಮರಳುವ ಆಟಗಾರ್ತಿಯರಿಗಾಗಿ ಅವಕಾಶ ನೀಡಲು ಶ್ರೇಯಾಂಕ ಪ್ರಕ್ರಿಯೆನ್ನು ಪರಿಷ್ಕರಿಸಲಾಗಿದೆ ಎಂದು ಹೇಳಿದ್ದಾರೆ. 

ಲಂಡನ್[ಜೂ.28]: ವಿಶ್ವ ಟೆನಿಸ್ ರ‍್ಯಾಂಕಿಂಗ್‌ನಲ್ಲಿ 183ನೇ ಸ್ಥಾನದಲ್ಲಿರುವ ಟೆನಿಸ್ ತಾರೆ ಅಮೆರಿಕದ ಸೆರೆನಾ ವಿಲಿಯಮ್ಸ್‌ಗೆ, ವಿಂಬಲ್ಡನ್ ಟೂರ್ನಿ ಆಯೋಜಕರು ಮಹಿಳಾ ಸಿಂಗಲ್ಸ್‌ನಲ್ಲಿ 25ನೇ ಶ್ರೇಯಾಂಕ ನೀಡಿದ್ದಾರೆ. 

ಇದು ಕೆಲವು ತಾರಾ ಆಟಗಾರ್ತಿಯರ ಕೆಂಗಣ್ಣಿಗೆ ಗುರಿಯಾಗಿದ್ದು, ಅಸಮಾಧಾನ ವ್ಯಕ್ತವಾಗಿದೆ. ಸೆರೆನಾಗೆ ನೀಡಿರುವ ಸ್ಥಾನದ ಕುರಿತು ಸಮರ್ಥಿಸಿಕೊಂಡಿರುವ ಆಯೋಜಕರು, ತಾಯ್ತನದ ಬಳಿಕ ಟೆನಿಸ್ ಅಂಗಳಕ್ಕೆ ಮರಳುವ ಆಟಗಾರ್ತಿಯರಿಗಾಗಿ ಅವಕಾಶ ನೀಡಲು ಶ್ರೇಯಾಂಕ ಪ್ರಕ್ರಿಯೆನ್ನು ಪರಿಷ್ಕರಿಸಲಾಗಿದೆ ಎಂದು ಹೇಳಿದ್ದಾರೆ. 

ಸೆರೆನಾ ತಾಯಿಯಾದ ಬಳಿಕ ಪಾಲ್ಗೊಳ್ಳುತ್ತಿರುವ 2ನೇ ಗ್ರ್ಯಾಂಡ್‌ಸ್ಲ್ಯಾಂ ಟೂರ್ನಿ ಇದಾಗಿದೆ. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಫೆಡರರ್, ಮಹಿಳಾ ಸಿಂಗಲ್ಸ್‌ನಲ್ಲಿ ಹಾಲೆಪ್ ಅಗ್ರ ಶ್ರೇಯಾಂಕ ಪಡೆದಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 2002ರಿಂದ 2017ರವರೆಗೆ ಎಂಟು ಬಾರಿ ನಂ.1 ಸ್ಥಾನದಲ್ಲಿ ರಾರಾಜಿಸಿದ್ದ, ಸೆರೆನಾ ಇದುವರೆಗೂ 23 ಗ್ರ್ಯಾಂಡ್’ಸ್ಲಾಂ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಸೆರೆನಾ ಇನ್ನೊಂದು ಗ್ರ್ಯಾಂಡ್’ಸ್ಲಾಂ ಜಯಿಸಿದರೆ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ ಜತೆಗೆ ಅತಿ ಹೆಚ್ಚು ಗ್ರ್ಯಾಂಡ್’ಸ್ಲಾಂ ಗೆದ್ದ ಆಟಗಾರ್ತಿಯರ ಪಟ್ಟಿಯಲ್ಲಿ ಅಗ್ರಸ್ಥಾನ ಹಂಚಿಕೊಳ್ಳಲಿದ್ದಾರೆ. 

loader