ತಾಯಿಗೆ ಭಾವನಾತ್ಮಕ ಪತ್ರ ಬರೆದ ಸೆರೆನಾ : ಚಿಕ್ಕಂದಿನ ಕಡುಕಷ್ಟಗಳನ್ನು ನೆನದ ಟೆನಿಸ್ ಆಟಗಾರ್ತಿ
ನ್ಯೂಯಾರ್ಕ್(ಸೆ.20): ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್, ಕೆಲ ದಿನಗಳ ಹಿಂದಷ್ಟೇ ಮೊದಲ ಬಾರಿಗೆ ತಮ್ಮ ಮಗುವಿನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಸೆರೆನಾ ತಮ್ಮ ತಾಯಿಗೆ ಭಾವನಾತ್ಮಕ ಪ್ರತವೊಂದನ್ನು ಬರೆದಿದ್ದಾರೆ. ತಮ್ಮನ್ನು ಬೆಳೆಸಲು ತಾಯಿ ಪಟ್ಟ ಕಷ್ಟಗಳನ್ನು ನೆನೆದಿರುವ ಸೆರೆನಾ, ತಾಯಿಯೇ ನನ್ನ ಪಾಲಿನ ಅತಿದೊಡ್ಡ ಸ್ಫೂರ್ತಿ ಎಂದಿದ್ದಾರೆ.
ತಮ್ಮ ಫೋಟೋ ಜತೆ ಮಗಳ ಫೋಟೋವನ್ನೂ ಸಹ ಹಾಕಿರುವ ಸೆರೆನಾ, ‘ನನ್ನ ಮಗಳ ಕೈ ಕಾಲುಗಳು ನನ್ನಷ್ಟೇ ಬಲಿಷ್ಠವಾಗಿಯೇ ಎಂದು ಅನಿಸುತ್ತಿದೆ. ನನಗೆ 15 ವರ್ಷವಿದ್ದಾಗ ನಾನು ಅನುಭವಿಸಿದ ಕಷ್ಟಗಳನ್ನು ನನ್ನ ಮಗಳು ಅನುಭವಿಸಿದರೆ ಹೇಗೆ ಎನ್ನುವುದನ್ನು ನನ್ನಿಂದ ಊಹೆ ಮಾಡಲೂ ಸಾಧ್ಯವಿಲ್ಲ’ ಎಂದು ಸೆರೆನಾ ಬರೆದಿದ್ದಾರೆ.
