ಈ ಬಗ್ಗೆ ಪ್ರತಿಕ್ರಿಯಿಸಿರುವ ವೀನಸ್ ವಿಲಿಯಮ್ಸ್ ' ಸಹಜವಾಗಿಯೇ ಖುಷಿಯಾಗಿ. ಈ ಖುಷಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಮಿಯಾಮಿ(ಸೆ.02): ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ಸೆರೆನಾ ಬುಧವಾರ ಫ್ಲಾರಿಡಾದ ಸೇಂಟ್ ಮೇರಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಹೆಣ್ಣು ಮಗುವಿಗೆ ಸೆರೆನಾ ತಾಯಿಯಾಗಿದ್ದಾರೆ.
ಅಮೆರಿಕ ಮಾಧ್ಯಮಗಳ ವರದಿ ಪ್ರಕಾರ ಮಗು 3.09 ಕೆಜಿ ತೂಕವಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವೀನಸ್ ವಿಲಿಯಮ್ಸ್ ' ಸಹಜವಾಗಿಯೇ ಖುಷಿಯಾಗಿ. ಈ ಖುಷಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಸೆರೆನಾಗೆ ಹಾಲಿ ಹಾಗೂ ಮಾಜಿ ಟೆನಿಸ್ ಆಟಗಾರರ, ಆಟಗಾರ್ತಿಯರಿಂದ, ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಅಲ್ಲದೇ ಸಾಮಾಜಿಕ ತಾಣಗಳಲ್ಲೂ ಈ ವಿಷಯ ಟ್ರೆಂಡ್ ಆಗುತ್ತಿದೆ.
ಆದರೆ ಈ ಕುರಿತಂತೆ ಸೆರೆನಾ ವಿಲಿಯಮ್ಸ್ ಆಗಲೀ ಆಕೆಯ ಪತಿ ಅಲೇಕ್ಸಿಸ್ ಓಹಾನಿಯನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
