ರಹಾನೆ ಅವರಂತಹ ಪ್ರಮುಖ ಆಟಗಾರ ಮುಂಬೈ ತಂಡದಿಂದ ಹೊರಗುಳಿದಿರುವುದು ಸಹಜವಾಗಿಯೇ ಮುಂಬೈ ಆಯ್ಕೆ ಸಮಿತಿಗೆ ನಿರಾಸೆಯನ್ನುಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ(ಅ.10): ಟೀಂ ಇಂಡಿಯಾ ಆರಂಭಿಕ ಆಟಗಾರರ ಅಜಿಂಕ್ಯ ರಹಾನೆ, ರಣಜಿ ಟ್ರೋಫಿಯ ಮಧ್ಯ ಪ್ರದೇಶ ವಿರುದ್ಧದ ಪಂದ್ಯಕ್ಕೆ ತಾವು ಲಭ್ಯವಿಲ್ಲ ಎನ್ನುವ ಮೂಲಕ ಮುಂಬೈ ಆಯ್ಕೆ ಸಮಿತಿಗೆ ನಿರಾಸೆ ಉಂಟುಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿರುವ ರಹಾನೆ, ಅಕ್ಟೋಬರ್ 14ರಿಂದ ಆರಂಭವಾಗಲಿರುವ ಮಧ್ಯ ಪ್ರದೇಶ ವಿರುದ್ಧದ ಪಂದ್ಯಕ್ಕೆ ಮುಂಬೈ ರಣಜಿ ತಂಡದ ಪರ ಕಣಕ್ಕಿಳಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ತಾವು ಈ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆಂದು ಮುಂಬೈ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ತಿಳಿಸಿದ್ದಾರೆ.
ರಹಾನೆ ಅವರಂತಹ ಪ್ರಮುಖ ಆಟಗಾರ ಮುಂಬೈ ತಂಡದಿಂದ ಹೊರಗುಳಿದಿರುವುದು ಸಹಜವಾಗಿಯೇ ಮುಂಬೈ ಆಯ್ಕೆ ಸಮಿತಿಗೆ ನಿರಾಸೆಯನ್ನುಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ.
41 ಬಾರಿ ರಣಜಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ತಂಡವನ್ನು ಆದಿತ್ಯ ತಾರೆ ಮುನ್ನಡೆಸಲಿದ್ದಾರೆ.